ದಾವಣಗೆರೆ:ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪಾಲಿಕೆ ಕಮಿಷನರ್ ವಿಶ್ವನಾಥ್ ಮುದ್ದಜ್ಜಿ ಹಾಗೂ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ವಿರುದ್ಧ ತನಿಖೆ ನಡೆದಿಲ್ಲ ಎಂದು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವಿರುದ್ಧ ಲೋಕಾಯುಕ್ತಕ್ಕೆ ದೂರು; ತನಿಖೆ ವಿಳಂಬ ಕೈ ಕಾರ್ಯಕರ್ತರ ಆಕ್ರೋಶ... ದಾವಣಗೆರೆ ನಗರದ ಹೊಂಡದ ವೃತ್ತದಲ್ಲಿ ಜಮಾಯಿಸಿದ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಲೋಕಾಯುಕ್ತರು ಪಾಲಿಕೆ ಕಮೀಷನರ್, ಜಿಲ್ಲಾ ಉಸ್ತುವಾರಿ ಸಚಿವರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ಲೋಕಾಯುಕ್ತ ವಿರುದ್ಧ ದಾವಣಗೆರೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ಗೆ 15 ಲಕ್ಷ ಹಣ ನೀಡಿದ್ದೇನೆ ಎಂದು ಲೋಕಾಯುಕ್ತ ದಾಳಿ ವೇಳೆ ಪಾಲಿಕೆ ವ್ಯವಸ್ಥಾಪಕ ಕೃಷ್ಣಪ್ಪ ಸಿಕ್ಕಿ ಬಿದ್ದಿದ್ದು, ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಅಲ್ಲಿಂದ ಇಲ್ಲಿತನಕ ಲೋಕಾಯುಕ್ತಗೆ ದೂರು ನೀಡಿದರೂ ತನಿಖೆ ನಡೆಸಿಲ್ಲ ಎಂದು ಲೋಕಾಯುಕ್ತ ವಿರುದ್ಧ ದಾವಣಗೆರೆ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ ಮಂಜುನಾಥ ಆಕ್ರೋಶ ಹೊರಹಾಕಿದರು.
ಇನ್ನು ಬೈರತಿ ಬಸವರಾಜ್ ನಗರಾಭಿವೃದ್ಧಿ ಸಚಿವರಾಗುವ ಬದಲು ಪ್ರವಾಸ್ಯೋದ್ಯಮ ಇಲಾಖೆಯ ಮಂತ್ರಿಯಾಗಬೇಕಿತ್ತು, ದಾವಣಗೆರೆಗೆ ಬಂದರೆ ಬೈರತಿ ಜಿ.ಪಂ ಮತ್ತು ಸ್ಮಾರ್ಟ್ ಸಿಟಿ ಕಚೇರಿ ಯಲ್ಲಿ ಮಾತ್ರ ಮೀಟಿಂಗ್ ಮಾಡುತ್ತಾರೆ. ಇಲ್ಲಿವರೆಗೂ ಪಾಲಿಕೆಯಲ್ಲಿ ಒಂದೆ ಒಂದು ಮೀಟಿಂಗ್ ಮಾಡಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಟೋಪಿ ತೊಟ್ಟ ಸೂರತ್ ತರಕಾರಿ ವ್ಯಾಪಾರಿಗಳು: ಇದು ಪೂರ್ವ ನಿಯೋಜಿತ ಎಂದ ಎಎಪಿ, ಕಾಂಗ್ರೆಸ್