ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಬೆಸಿಲಿಕಾ ಚರ್ಚ್ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪ ಕೇಳಿ ಬಂದಿದ್ದು, ಚರ್ಚ್ ವಿರುದ್ಧ ದೂರು ದಾಖಲಾಗಿದೆ.
ಹರಿಹರ ತಾಲೂಕಿನಲ್ಲಿರುವ ಆರೋಗ್ಯ ಮಾತಾ ಬೆಸಿಲಿಕಾ ಚರ್ಚ್ನಲ್ಲಿ ಬುಧವಾರ ಕೋವಿಡ್ ನಿಯಮ ಉಲ್ಲಂಘಿಸಿ ಮೇರಿಯಮ್ಮ ಜಾತ್ರೆಯನ್ನು ನಡೆಸಲಾಗಿತ್ತು. ಈ ಬೆನ್ನಲ್ಲೇ ಚರ್ಚ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ. ನಗರಸಭೆ ಆಯುಕ್ತೆ ಎಸ್. ಲಕ್ಷ್ಮೀ ಚರ್ಚ್ ಆಡಳಿತ ಮಂಡಳಿ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.