ದಾವಣಗೆರೆ:ನಗರದ ಕೋವಿಡ್ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್ಗಳಿಗೆ ಭೇಟಿ ನೀಡಿದ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಪಾಲಿಕೆಯ ಸದಸ್ಯರು ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ. ನಾಗರಾಜ್ ಜೊತೆ ಮಾತನಾಡಿದ ಪಾಲಿಕೆಯ ಸದಸ್ಯರು, ಕೋವಿಡ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು. ವೆಂಟಿಲೇಟರ್ ತೊಂದರೆಯಿಂದ ಪ್ರತಿದಿನ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಇದ್ದು ಇದರ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಪಾಲಿಕೆಯ ಪ್ರತಿಪಕ್ಷ ನಾಯಕರು ಇದಕ್ಕೆ ಪ್ರತಿಕ್ರಿಯಿಸಿದ ಡಾ. ನಾಗರಾಜ್, ನಮ್ಮಲ್ಲಿ 14 ವೆಂಟಿಲೇಟರ್ ಇದ್ದು ಅದರಲ್ಲಿ 10 ವೆಂಟಿಲೇಟರ್ಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಪಿಎಂ ಕೇರ್ನಿಂದ 25 ವೆಂಟಿಲೇಟರ್ಗಳು ಬಂದಿದ್ದು ಅದನ್ನು ನಿರ್ವಹಿಸಲು ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವ ಕಾರಣ ಹಾಗೆ ಇವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು ಸಿಬ್ಬಂದಿ ನೀಡಿದ ತಕ್ಷಣ ವೆಂಟಿಲೇಟರ್ ಕಾರ್ಯನಿರ್ವಹಣೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್, ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ಅವರಿಗೆ ನೀಡುವ ಆಹಾರದ ಬಗ್ಗೆ ಪ್ರಶ್ನೆ ಮಾಡಿದಾಗ ಸರ್ಜನ್ ಡಾ. ಶಶಿಧರ್ ಪ್ರತಿಕ್ರಿಯಿಸಿ 303 ರೋಗಿಗಳು ದಾಖಲಾಗಿದ್ದು ಅದರಲ್ಲಿ 221 ಪಾಸಿಟಿವ್ ಕೇಸ್ ಇದೆ. ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಚಪಾತಿ, ಪಲ್ಯ, ಅನ್ನ, ಸಾಂಬಾರ್ ನೀಡಲಾಗುತ್ತದೆ. ಸಂಜೆ ಹಾಲು ಮತ್ತು ಡ್ರೈ ಫ್ರೂಟ್ಸ್ ನೀಡಲಾಗುತ್ತದೆ. ರೋಗಿಗಳಿಗೆ ಊಟದ ರುಚಿ ತಿಳಿಯದ ಕಾರಣ ಊಟ ಸರಿ ಇಲ್ಲ ಎಂದು ಹೇಳುತ್ತಾರೆ ವಿನಾಃ ಬೇರೆ ರೀತಿಯ ಯಾವುದೇ ತೊಂದರೆ ಇಲ್ಲ. ಸ್ವತಃ ಎಸ್ಪಿಯವರು ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಆಸ್ಪತ್ರೆಗೆ ಭೇಟಿ ನೀಡಿದ ಪಾಲಿಕೆಯ ಪ್ರತಿಪಕ್ಷ ನಾಯಕರು ಡಾ. ಸಂಜಯ್ ಮಾತನಾಡಿ ಪ್ರತಿದಿನ 650 ಸಿಲೆಂಡರ್ ಅವಶ್ಯಕತೆಯಿದ್ದು ಈಗ 300 ಸಿಲೆಂಡರ್ ಮಾತ್ರ ದೊರೆಯುತ್ತಿದೆ. ಆದ್ದರಿಂದ ನಿರ್ವಹಣೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ಸದ್ಯ ಜಂಬೋ ಸಿಲೆಂಡರ್ ಮೂಲಕ ಆಕ್ಸಿಜನ್ ಸಪ್ಲೈ ಮಾಡುತ್ತಿದ್ದು, ಎಸ್.ಎಸ್. ಹೈಟೆಕ್ ಹಾಗೂ ಬಾಪೂಜಿ ಹಾಸ್ಪಿಟಲ್ನಲ್ಲಿ ಇರುವಂತೆ ಲಿಕ್ವಿಡ್ ಟ್ಯಾಂಕ್ ಮೂಲಕ ಆಕ್ಸಿಜನ್ ಸಪ್ಲೈ ಮಾಡಿದರೆ ಅನುಕೂಲವಾಗುತ್ತದೆ. ಸಿಜೆ ಆಸ್ಪತ್ರೆಯಲ್ಲೂ ಸಹ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಲಿಕ್ವಿಡ್ ಟ್ಯಾಂಕ್ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ವೈದ್ಯರು ಹಾಗೂ ಸಿಬ್ಬಂದಿ ಮಾಡುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.