ದಾವಣಗೆರೆ: ಸಿಎಂ ಯಡಿಯೂರಪ್ಪ ನುಡಿದಂತೆ ನಡೆದಿದ್ದಾರೆ. ನಾವೆಲ್ಲರೂ ಬಿಜೆಪಿಗೆ ಬರುವಾಗ ಕೊಟ್ಟ ಭರವಸೆ ಈಡೇರಿಸಿದ್ದಾರೆ. ನಾನಾಗಲಿ ಹಾಗೂ ಭೈರತಿ ಅವರಾಗಲಿ ಇಂತಹವರಿಗೆ ಸಚಿವ ಸ್ಥಾನ ನೀಡಿ ಎನ್ನುವ ಬೇಡಿಕೆ ಇಡಲು ಆಗಲ್ಲ ಎಂದು ಸಹಕಾರ ಸಚಿವ ಸೋಮಶೇಖರ್ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಕೊಟ್ಟ ಭರವಸೆ ಈಡೇರಿಸುತ್ತಾರೆ: ಸಚಿವ ಸೋಮಶೇಖರ್ - minister somashekhar
ಸಿಎಂ ಯಡಿಯೂರಪ್ಪ ನಾವೆಲ್ಲರೂ ಬಿಜೆಪಿಗೆ ಬರುವಾಗ ಕೊಟ್ಟ ಭರವಸೆ ಈಡೇರಿಸಿದ್ದಾರೆ ಎಂದು ಸಹಕಾರ ಸಚಿವ ಸೋಮಶೇಖರ್ ಹೇಳಿದ್ದಾರೆ.
![ಸಿಎಂ ಯಡಿಯೂರಪ್ಪ ಕೊಟ್ಟ ಭರವಸೆ ಈಡೇರಿಸುತ್ತಾರೆ: ಸಚಿವ ಸೋಮಶೇಖರ್ minister somashekhar](https://etvbharatimages.akamaized.net/etvbharat/prod-images/768-512-9558703-thumbnail-3x2-vid.jpg)
ಮಾಧ್ಯಮದವರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ಪ್ರತಾಪ್ ಗೌಡ ಪಾಟೀಲ್ ಅವರಿಗೆ ಸಿಎಂ ನೀಡಿದ ಭರವಸೆ ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ರಚನೆ ಮುಖ್ಯಮಂತ್ರಿ ಅವರಿಗೆ ಬಿಟ್ಟದ್ದು. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಚರ್ಚೆ ನಡೆಸಿಲ್ಲ. ಈ ವಿಚಾರದಲ್ಲಿ ಅವರದ್ದೇ ಪರಮಾಧಿಕಾರ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಅವರೊಂದಿಗೆ ಚರ್ಚಿಸಿ ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಅಲ್ಲ. ಬಿಜೆಪಿ ಯಾವ ರಾಜಕೀಯ ಮಾಡಿಲ್ಲ. ಒತ್ತಡವನ್ನೂ ಹೇರಿಲ್ಲ ಎಂದು ಸೋಮಶೇಖರ್ ಹೇಳಿದರು.