ಕರ್ನಾಟಕ

karnataka

ETV Bharat / state

ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಲು ಕ್ರಮ: ಸಿಎಂ ಬಿಎಸ್​​ವೈ ಭರವಸೆ - Davangere latest News

ಬಹುದಿನಗಳ ಬೇಡಿಕೆಯಾಗಿರುವ ಎಸ್​ಟಿ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಾಲ್ಮೀಕಿ ಸಮಾವೇಶದ ವೇದಿಕೆಯಲ್ಲಿ ತಿಳಿಸಿದರು.

CM yadiyurappa
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

By

Published : Feb 9, 2021, 5:40 PM IST

ದಾವಣಗೆರೆ:ನಿಮ್ಮ (ಜನರ) ಭಾವನೆ ಹಾಗೂ ಸ್ವಾಮೀಜಿಯವರ ಭಾವನೆ ತಿಳಿದುಕೊಳ್ಳಬೇಕೆಂದು ಈ ಕಾರ್ಯಕ್ರಮದಲ್ಲಿ ಭಾಗಿಯಾದೆ ಹೊರತಾಗಿ ಮನಸ್ಸು ನೋಯಿಸಲು ನಾನು ಇಲ್ಲಿ ಬಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೆರೆದಿದ್ದ ಜನರಿಗೆ ಸಂದೇಶ ರವಾನಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ವಾಲ್ಮೀಕಿ ಸಮಾವೇಶದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಆಶಯ ಪೂರೈಸೋದು ನಮ್ಮ ಕರ್ತವ್ಯ. ಬಹುದಿನಗಳ ಬೇಡಿಕೆಯಾಗಿರುವ ಎಸ್​ಟಿ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಮೀಸಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಈಗಾಗಲೇ ನಾಗಮೋಹನ ದಾಸ್ ವರದಿ ಸರ್ಕಾರದ ಕೈ ಸೇರಿದೆ. ನಾಗಮೋಹನ ದಾಸ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details