ದಾವಣಗೆರೆ: ಏನು ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಡಿಕೆಶಿಗೆ ಸ್ವಾಗತ ಕೋರಲಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಟೀಕಿಸಿದ್ದಾರೆ.
ಸ್ವಾಗತ ಕೋರಲು ಡಿಕೆಶಿ ಏನು ಪಾಕಿಸ್ತಾನ ಜೊತೆಗೆ ಯುದ್ದ ಗೆದ್ದು ಬಂದಿದ್ದಾರಾ?: ರೇಣುಕಾಚಾರ್ಯ - ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ.
![ಸ್ವಾಗತ ಕೋರಲು ಡಿಕೆಶಿ ಏನು ಪಾಕಿಸ್ತಾನ ಜೊತೆಗೆ ಯುದ್ದ ಗೆದ್ದು ಬಂದಿದ್ದಾರಾ?: ರೇಣುಕಾಚಾರ್ಯ](https://etvbharatimages.akamaized.net/etvbharat/prod-images/768-512-4888903-thumbnail-3x2-dvg.jpg)
ಈ ಹಿಂದೆ ಪುಲ್ವಾಮ ದಾಳಿ ಬಳಿಕ ಅಭಿನಂದನ್ಗೆ ಗಡಿಭಾಗದಲ್ಲಿ ಬಿಡುಗಡೆಯಾಯಿತು ಅಂತವರಿಗೆ ಸ್ವಾಗತ ಕೋರಿದರೆ ಸರಿ, ಇವರೇನು ಪಾಕಿಸ್ತಾನ ಜೊತೆಗೆ ಯುದ್ದ ಮಾಡಿದ್ದಾರ ಅಥವಾ ಕ್ರೀಡೆಯಲ್ಲಿ ಗೆದ್ದಿದ್ದಾರಾ. ಅವರಂತೆಯೆ ಡಿಕೆಶಿಗೆ ಮೆರವಣಿಗೆ ಮಾಡಿದ್ದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದವರು ಎಂದು ಛೇಡಿಸುತ್ತಿದ್ದರು, ಆದರೆ ಈಗ ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ತಿಳಿಯಲಿ. ಈ ಹಿಂದೆ ಸೇಡಿನ ರಾಜಕಾರಣ ಮಾಡಿ ಅಮಿತ್ ಷಾ ಅವರಿಗೆ ತೊಂದರೆ ಕೊಡಲಿಲ್ಲವೇ. ಡಿಕೆಶಿ ಜೈಲಿಂದ ಹೊರಬಂದ ಬಳಿಕ ಸೇಡಿನ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸೇಡಿನ ರಾಜಕಾರಣ ಮಾಡಲ್ಲ. ಇಡಿ, ಸಿಬಿಐನ ದುರ್ಬಳಕೆ ಮಾಡಿಕೊಳ್ಳಲ್ಲ ಎಂದ ತಿಳಿಸಿದರು.