ದಾವಣಗೆರೆ :ದೆಹಲಿಯಲ್ಲಿ ಯಡಿಯೂರಪ್ಪನವರ ವಿರುದ್ಧ ದೂರು ನೀಡಿಲ್ಲ. ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿ ಕೊಟ್ಟವರು. ಅವರ ವಿರುದ್ದ ಯಾವತ್ತು ನಾನು ನಡೆದು ಕೊಂಡಿಲ್ಲ. ಅವರ ಬಗ್ಗೆ ಮಾತನಾಡಿದ್ರೆ ಹುಳ ಬೀಳುತ್ತೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಉಸ್ತುವಾರಿಗಳಿಗೆ ರಾಜ್ಯದ ವಾಸ್ತವ ಸ್ಥಿತಿ ಗಮನಕ್ಕೆ ತಂದಿದ್ದೇನೆ. ರಮೇಶ್ ಜಾರಕಿಹೊಳಿ ಯಾವ ಆಧಾರದಲ್ಲಿ ಯೋಗೇಶ್ವರ್ ಪರವಾಗಿ ಮಾತಾಡಿದ್ದಾರೋ ಗೊತ್ತಿಲ್ಲ.
ಸಚಿವ ಯೋಗೇಶ್ವರ್ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜೊತೆ ಒಳ ಒಪ್ಪಂದ ಮಾಡಿಕೊಂಡವರು. ಒಳ ಒಪ್ಪಂದ ಮಾಡಿಕೊಂಡು ಈಗ ಪಕ್ಷ ನನ್ನಿಂದಲೇ ಬಂತು ಅಂತಾ ಬೀಗುತ್ತಿದ್ದಾರೆ ಎಂದು ಸಿ ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಬಿಎಸ್‌ವೈ ಕುರಿತಂತೆ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ.. ಪಕ್ಷದ ಶಿಸ್ತಿನ ಸಿಪಾಯಿ ನಾನು. ನಾನು ಬಂಡಾಯ ಅಲ್ಲ. ಅಸಮಾಧಾನ ಇಲ್ಲ. ಯಡಿಯೂರಪ್ಪ ನನಗೆ ತಂದೆಯ ಸಮಾನರಿದ್ದಂತೆ. ದೆಹಲಿಗೆ ನಾಳೆ ಹೋಗ್ತಾ ಇದ್ದೇನೆ. ಹೋಗುವ ಮುನ್ನ ಶಾಸಕರ ಸಭೆ ನಡೆಸುತ್ತೇನೆ.
ಅಸಮಾಧಾನ ಇರುವ ಶಾಸಕರ ಸಭೆ ಬೆಂಗಳೂರಿನಲ್ಲಿ ನಡೆಯುತ್ತದೆ. ವ್ಯವಸ್ಥೆ ಸರಿ ಪಡಿಸಲು ಒತ್ತಾಯಿಸುತ್ತೇನೆ. ಪ್ರಾದೇಶಿಕವಾಗಿ ಸರಿ ಮಾಡಬೇಕಾಗಿದೆ ಎಂದರು.
ಓದಿ:ಉಕ್ಕಡಗಾತ್ರಿ ಪುಣ್ಯಕ್ಷೇತ್ರ: ನಂಬಿ ಬಂದವರ ಕಾಯುವ ಶ್ರೀ ಕರಿಬಸವೇಶ್ವರ..!
ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ, ಆ ವ್ಯಕ್ತಿಯಿಂದ ಸರ್ಕಾರ ಬಂದಿಲ್ಲ. ನಮ್ಮ ಪಕ್ಷದವರು ಅದನ್ನ ಸಾಬೀತು ಮಾಡಲಿ. ರಮೇಶ ಜಾರಕಿಹೊಳಿ ಒಬ್ಬರನ್ನು ವೈಭವೀಕರಿಸುತ್ತಿದ್ದಾರೆ.
ರಮೇಶಣ್ಣ ನಿಂಗೆ ಒಳ್ಳೆ ಖಾತೆ ಸಿಕ್ಕಿದೆ ಅದನ್ನು ನೋಡಿಕೊಂಡು ಸುಮ್ನೆ ಇರು. ಸರ್ಕಾರ ಬರಲು ನಯಾ ಪೈಸೆ ಖರ್ಚು ಮಾಡಿಲ್ಲ. ಇದೆಲ್ಲ ಶುದ್ದ ಸುಳ್ಳು. ಎಂಟಿಬಿ ನಾಗರಾಜ್ ಯಾವುದೇ ಸಾಲ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಶಾಸಕರು ನನಗೆ ಕಾಲ್ ಮಾಡ್ತಾ ಇದ್ದಾರೆ. ಎಲ್ಲರೂ ಸೇರಿ ಸಭೆ ನಡೆಸುತ್ತೇವೆ. ಇದು ಸಿಎಂ ವಿರುದ್ದ ಅಲ್ಲ. ಈಗಾಗಿರುವ ಅವ್ಯವಸ್ಥೆ, ಲೋಪಗಳನ್ನು ಸರಿಪಡಿಸಲು ಸಭೆ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.