ದಾವಣಗೆರೆ:ಮೈತ್ರಿ ಸರ್ಕಾರ ಮುಂದುವರೆಯುತ್ತದೆ. ಮುಖ್ಯಮಂತ್ರಿ ಬದಲಾಗುವ ಸಾಧ್ಯತೆ ಇದೆ ಎಂದು ಹರಿಹರ ಶಾಸಕ ಎಸ್.ರಾಮಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾಗುವ ಸಾಧ್ಯತೆ ಇದೆ: ಶಾಸಕ ರಾಮಪ್ಪ ಹೊಸ ಬಾಂಬ್ - undefined
ಒಂದು ವರ್ಷದಿಂದ ನನ್ನನ್ನು ಬಿಜೆಪಿಗೆ ಕರೀತಾನೆ ಇದ್ದಾರೆ, ಇವಾಗ್ಲೂ ಕರೆದಿದ್ದಾರೆ. ಆದರೆ ನಾನು ಕಾಂಗ್ರೆಸ್ ಪಕ್ಷವನ್ನು ನಂಬಿದ್ದೆನೆ. 64 ಸಾವಿರ ಜನ ನನನ್ನು ನಂಬಿ ಮತ ನೀಡಿದ್ದಾರೆ. ಹಣ ಮತ್ತು ಸಚಿವ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತೇನೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಪ್ಪ, ಮುಖ್ಯಮಂತ್ರಿ ಬದಲಾವಣೆ ಆಗುವ ಸಾಧ್ಯತೆ ಇದೆ. ಆದರೆ ಸಿಎಂ ಯಾರಾಗುತ್ತಾರೆ ಗೊತ್ತಿಲ್ಲ. ಇದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಮೈತ್ರಿ ಸರ್ಕಾರ ಮೊದಲಿನ ರೀತಿಯೇ ಮುಂದುವರೆಯಲಿದೆ ಎಂದರು.
ಪ್ರಕೃತಿ ಚಿಕಿತ್ಸೆಗೆಂದು ಧರ್ಮಸ್ಥಳಕ್ಕೆ ಹೋಗಿದ್ದೆ. ಒಂದು ವರ್ಷದಿಂದ ನನ್ನನ್ನು ಬಿಜೆಪಿಗೆ ಕರೀತಾನೆ ಇದ್ದಾರೆ, ಇವಾಗ್ಲೂ ಕರೆದಿದ್ದಾರೆ. ಆದರೆ ನಾನು ಕಾಂಗ್ರೆಸ್ ಪಕ್ಷವನ್ನು ನಂಬಿದ್ದೇನೆ. 64 ಸಾವಿರ ಜನ ನನನ್ನು ನಂಬಿ ಮತ ನೀಡಿದ್ದಾರೆ. ಹಣ ಮತ್ತು ಸಚಿವ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತೆನೆ ಎಂದರು.