ದಾವಣಗೆರೆ:ಪಂಚಮಸಾಲಿ ಸಮುದಾಯವನ್ನು 3ಬಿ ಗೆ ಸೇರಿಸಿದ್ದೇ ನಮ್ಮ ಸರ್ಕಾರ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಿದ್ದೇ ನಮ್ಮ ಸರ್ಕಾರ: ಸಿಎಂ - ಸಿಎಂ ಬಿ.ಎಸ್ ಯಡಿಯೂರಪ್ಪ
ಪಂಚಮಸಾಲಿ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸಿದೆ. ಸಮಾಜವನ್ನು 3ಬಿ ವರ್ಗಕ್ಕೆ ಸೇರಿಸಿದ್ದೇ ನಮ್ಮ ಸರ್ಕಾರ ಎಂದು ಸಿಎಂ ಹೇಳಿದರು.
ದಾವಣಗೆರೆ
ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮ ಬಳಿ ಪಂಚಮಸಾಲಿ ಪೀಠದ ಹರ ಜಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠವನ್ನು ಅಭಿವೃದ್ಧಿ ಮಾಡಲು ವಚನಾನಂದ ಶ್ರೀಗಳು ಹಣಕಾಸು ಕೇಳಿದ್ದರು. ಅದರಂತೆ ಹತ್ತು ಕೋಟಿ ರೂ. ಮಂಜೂರು ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಆ ಹತ್ತು ಕೋಟಿ ರೂ. ಅನುದಾನವನ್ನು ಮಠದ ಖಾತೆಗೆ ವರ್ಗಾವಣೆ ಮಾಡ್ತೇನೆ. ಆ ಹಣದ ಉಪಯೋಗವನ್ನು ಪೂಜ್ಯರು ಮಾಡಿಕೊಳ್ಳಬೇಕು ಎಂದರು.
ನಾನು ಬೇರೆ, ನೀವು ಬೇರೆ ಅಲ್ಲ. ಈ ಸಮಾಜದೊಂದಿಗೆ ನಾನು ಇದ್ದೇನೆ ಎಂದು ಪಂಚಮಸಾಲಿ ಸಮುದಾಯಕ್ಕೆ ಸಿಎಂ ಅಭಯ ನೀಡಿದರು.