ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ರಾಜಕೀಯ ಜಂಜಡ ಬದಿಗಿಟ್ಟು ಆಪ್ತನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಮನೂರು ಶಿವಶಂಕರಪ್ಪನವರ ಮೊಮ್ಮಗಳು ಅಕ್ಷತಾ ಹಾಗು ಸಿಎಂ ಬೊಮ್ಮಾಯಿ ಆಪ್ತನ ಪುತ್ರ ಅಭಿಷೇಕ್ ಪಾಟೀಲ್ ವಿವಾಹ ಇಲ್ಲಿನ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು.
ಪಕ್ಷಭೇದ ಮರೆತು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಅವರ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಿಎಂ ಬೊಮ್ಮಾಯಿ ಜೊತೆ ಕುಳಿತು ಮದುವೆ ಮನೆಯಲ್ಲಿ ಮಾತುಕತೆ ನಡೆಸಿದರು. ಅಭಿಷೇಕ್ ಪಾಟೀಲರನ್ನು ತಬ್ಬಿಕೊಂಡ ಸಿಎಂ ಮದುವೆಯ ಶುಭಾಶಯ ಕೋರಿದರು. ಸಚಿವರಾದ ಭೈರತಿ ಬಸವರಾಜ್, ಮಾಧುಸ್ವಾಮಿ ಇದ್ದರು.