ದಾವಣಗೆರೆ :ಇಂದು ರಚನಾ ವರದಿ ಒಪ್ಪಿ ಸಂವಿಧಾನ ಅಂಗೀಕಾರವಾದ ಮಹತ್ವದ ದಿನ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನ ಆರ್ಥಿಕ, ಧಾರ್ಮಿಕ, ಸಮಾನತೆ, ಭ್ರಾತೃತ್ವವನ್ನು ಒಳಗೊಂಡಿದೆ. ಮಾನವೀಯ ಗುಣ ಹೊಂದಿರುವ ಶ್ರೇಷ್ಠ ಸಂವಿಧಾನ ನಮ್ಮದು. ಇದು ಇಲ್ಲದಿದ್ದರೆ ಐಕ್ಯತೆ, ಅಖಂಡತೆ, ನಾಗರಿಕ ಹಕ್ಕುಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ನಮ್ಮನ್ನು ಆಳಿದ ಬ್ರಿಟಿಷರ ಬಳಿಯೇ ಲಿಖಿತ ಸಂವಿಧಾನ ಇಲ್ಲ. ಆದರೆ, ಅಂಬೇಡ್ಕರ್ ಅವರು ಮಾನವೀಯ ಗುಣ ಕಡಿಮೆ ಆಗಬಾರದೆಂಬ ಉದ್ದೇಶನಿಟ್ಟುಕೊಂಡು ಸಂವಿಧಾನ ರಚನೆ ಮಾಡಿದರು. ನಾಗರಿಕತೆ ಇಲ್ಲದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ನಮ್ಮ ಸಂವಿಧಾನ 130 ಕೋಟಿ ಜನಸಂಖ್ಯೆ ಇರುವ ದೇಶವನ್ನು ಕಾಪಾಡಿದೆ ಎಂದರು.