ದಾವಣಗೆರೆ: ಹಲವು ವರ್ಗದವರು ಮೀಸಲಾತಿ ಹೋರಾಟ ಮಾಡಿ ಒತ್ತಡ ಹಾಕ್ತಾ ಇದ್ದು, ಎಲ್ಲವನ್ನೂ ಕೂಡ ಕೂಲಂಕಶವಾಗಿ ಪರಿಶೀಲನೆ ನಡೆಸಿ ನ್ಯಾಯ ಕೊಡಬೇಕು ಎಂಬ ಉದ್ದೇಶ ಸಿಎಂ ಅವರದ್ದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕೆಲವು ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖ ಆಗಿದೆ. ಜಡ್ಜ್ಮೆಂಟ್ ಕೂಡ ಆಗಿದ್ದು, ತಮಿಳುನಾಡಿನ 50% ಹೆಚ್ಚು ಮೀಸಲಾತಿ ಹಾಗೂ ಶೆಡ್ಯುಲ್ 9 ಬಗ್ಗೆ ಕೋರ್ಟ್ ಪರಾಮರ್ಶೆ ಮಾಡಬೇಕಿದೆ. ಬ್ಯಾಕ್ವರ್ಡ್ ಕ್ಲಾಸ್ಗೆ ಯಾರು ಸೇರಬೇಕು ಎಂಬ ಅಧ್ಯಯನ ಕೂಡ ಇದೆ. ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಕಮಿಷನ್ ಇದೆ. ಅರ್ಜಿಗಳನ್ನು ಕಮಿಷನ್ಗೆ ಕಳುಹಿಸಲು ಶಿಫಾರಸು ಮಾಡಬೇಕಿದೆ. ನಂತರ ಒಪ್ಪಿಗೆ ಆದರೆ ಅನುಷ್ಠಾನ ಚಿಂತನೆ ಮಾಡಬೇಕಿದೆ. ಸಿಎಂ ಬಿಎಸ್ವೈ ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದು, ಸಮಗ್ರವಾಗಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.