ದಾವಣಗೆರೆ: ನಟ ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ತುಂಗಭದ್ರಾ ನದಿಯ ತಟದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಹರಿಹರ ಬಳಿ ಇರುವ ನದಿಯ ದಡ, ಹರಿಹರೇಶ್ವರ ದೇವಾಲಯದ ಆವರಣ ಸೇರಿದಂತೆ ಪ್ರಮುಖ ರಸ್ತೆಗಳ ಸ್ವಚ್ಛಗೊಳಿಸುವ ಕಾರ್ಯವನ್ನು ಈ ತಂಡ ಕೈಗೊಂಡಿದೆ.
ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಚತಾ ಕಾರ್ಯ - cleanup work by master anand and team
ನಟ ಮಾಸ್ಟರ್ ಆನಂದ್ ಗ್ರೀನ್ ಗೆಳೆಯರು ಎಂಬ ತಂಡ ಕಟ್ಟಿಕೊಂಡು ಹರಿಹರದ ತುಂಗಾಭದ್ರ ನದಿ ತಟ ಸ್ವಚ್ಛಗೊಳಿಸಿ ಬಳಿಕ ಹರಿಹರೇಶ್ವರ ದೇವಸ್ಥಾನದ ಆವರಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ಈ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
![ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಚತಾ ಕಾರ್ಯ cleanup-work-by-a-team-of-green-friends-led-by-master-anand](https://etvbharatimages.akamaized.net/etvbharat/prod-images/768-512-15547937-thumbnail-3x2-yyy.jpg)
ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಚತಾ ಕಾರ್ಯ
ವಾರದ ಹಿಂದೆ ಮಾಸ್ಟರ್ ಆನಂದ್ ಹಾಗೂ ಅವರ ಸ್ನೇಹಿತರು ಗ್ರೀನ್ ಗೆಳೆಯರ ತಂಡ ರಚಿಸಿದ್ದು, ಮೊದಲನೇ ಸ್ವಚ್ಛತಾ ಕಾರ್ಯವನ್ನು ತುಂಗಾಭದ್ರ ನದಿಯ ತಟದಿಂದಲೇ ಆರಂಭಿಸಿ, ನಂತರ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದಾದ ನಂತರ ದೇಗುಲದ ಮುಂಭಾಗದ ರಸ್ತೆ ಹಾಗೂ ಪ್ರಮುಖ ಬೀದಿಗಳನ್ನೂ ಶುಚಿಗೊಳಿಸಿದರು. ಹರಿಹರದ ರೈತ ಮುಖಂಡ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ:ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವದಂತಿ: ಮುಸ್ಲಿಂ ಮುಖಂಡರೊಂದಿಗೆ ಕಮಿಷನರ್ ಸಭೆ