ದಾವಣಗೆರೆ: ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಪೌರಕಾರ್ಮಿಕ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಸೂಕ್ತ ಚಿಕಿತ್ಸೆ ಸಿಗದೆ ಉಸಿರಾಟದ ತೊಂದರೆಯಿಂದ ಪೌರ ಕಾರ್ಮಿಕ ಸಾವು - ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಡಿಸಿ ಆಸ್ಪತ್ರೆಗೆ ಬಂದಾಗ ಉಚ್ಚೆಂಗಪ್ಪ ಕಾಲಿಗೆ ಬೀಳಲು ಮುಂದಾದರು. ಕಣ್ಣೀರು ಹಾಕಿದ್ದರು. ಡಿಸಿ ಅವರೂ ಉಚ್ಚೆಂಗಪ್ಪ ಕಾಲಿಗೆ ಬೀಳಲು ಮುಂದಾಗಿ ಕ್ಷಮೆ ಕೇಳಿದ್ದರು..
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ತಿಳಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗಾಂಧಿನಗರದ ಕುಮಾರ್ (35) ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಅಲೆದರೂ ವೆಂಟಿಲೇಟರ್ ಸಿಕ್ಕಿರಲಿಲ್ಲ ಎನ್ನಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದೇ ಸಾವಿಗೆ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಡಿಸಿ ಆಸ್ಪತ್ರೆಗೆ ಬಂದಾಗ ಉಚ್ಚೆಂಗಪ್ಪ ಕಾಲಿಗೆ ಬೀಳಲು ಮುಂದಾದರು. ಕಣ್ಣೀರು ಹಾಕಿದ್ದರು. ಡಿಸಿ ಅವರೂ ಉಚ್ಚೆಂಗಪ್ಪ ಕಾಲಿಗೆ ಬೀಳಲು ಮುಂದಾಗಿ ಕ್ಷಮೆ ಕೇಳಿದ್ದರು. ಕುಮಾರ್ ಬದುಕಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.