ಕರ್ನಾಟಕ

karnataka

ETV Bharat / state

ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ: ದಾವಣಗೆರೆಯಲ್ಲಿ ಇಬ್ಬರು ಮಕ್ಕಳ ರಕ್ಷಣೆ - ದಾವಣಗೆರೆಯಲ್ಲಿ ಬಾಲಕಾರ್ಮಿಕರ ರಕ್ಷಣೆ

ದಾವಣಗೆರೆ ಜಿಲ್ಲೆಯ ತಹಶೀಲ್ದಾರ್ ಕಚೇರಿ ಆವರಣ, ಎಪಿಎಂಸಿ ಈರುಳ್ಳಿ ಮಾರ್ಕೆಟ್, ಪಿಸಾಳೆ ಕಾಂಪೌಂಡ್, ಫೈರ್ ಸ್ಟೇಷನ್ ಹಿಂಭಾಗ, ಆರ್.ಎಂ.ಸಿ ರಸ್ತೆ, ಪಿ.ಬಿ. ರಸ್ತೆ ಹಾಗೂ ವಿನೋಬ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಯಿತು.

rescue of two Child labor  in Davangere
ದಾವಣಗೆರೆಯಲ್ಲಿ ಇಬ್ಬರು ಮಕ್ಕಳ ರಕ್ಷಣೆ

By

Published : Oct 17, 2020, 2:07 PM IST

ದಾವಣಗೆರೆ: ನಗರದ ಕೆಲವೆಡೆ ದಾಳಿ ನಡೆಸಿದ ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ತಹಶೀಲ್ದಾರ್ ಕಚೇರಿ ಆವರಣ, ಎಪಿಎಂಸಿ ಈರುಳ್ಳಿ ಮಾರ್ಕೆಟ್, ಪಿಸಾಳೆ ಕಾಂಪೌಂಡ್, ಫೈರ್ ಸ್ಟೇಷನ್ ಹಿಂಭಾಗ, ಆರ್.ಎಂ.ಸಿ ರಸ್ತೆ, ಪಿ.ಬಿ. ರಸ್ತೆ ಹಾಗೂ ವಿನೋಬ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 2 ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ದಾಳಿ ನಡೆಸಿದರು.

ದಾಳಿಯ ವೇಳೆ ಪತ್ತೆಯಾದ ಇಬ್ಬರು ಗಂಡು ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿ ಹಾಗೂ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ. ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ನಿರೀಕ್ಷಕರಾದ ರಾಜಶೇಖರ್ ಹಿರೇಮಠ, ನಾಗೇಶ್, ರಾಜಪ್ಪ, ಎನ್.ಸಿ.ಎಲ್.ಪಿ ಯೋಜನಾ ನಿರ್ದೇಶಕ ಪ್ರಸನ್ನ ತಂಡದಲ್ಲಿದ್ದರು.

ಯಾವುದೇ ಮಾಲೀಕರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಂಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ1098, ದೂ.ಸಂ: 08192-237332, 230094 ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ದೂ.ಸಂ:08192-256626ಕ್ಕೆ ಸಂಪರ್ಕಿಸಬಹುದೆಂದು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.

ABOUT THE AUTHOR

...view details