ಕರ್ನಾಟಕ

karnataka

ETV Bharat / state

ದಾವಣಗೆರೆ: ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಮಗು ಸಾವು - ಜಗಳೂರು ಸರ್ಕಾರಿ ಆಸ್ಪತ್ರೆ

ನೀರು ತುಂಬಿಟ್ಟಿದ್ದ ಬಕೆಟ್‌​ ಒಳಗೆ ಬಿದ್ದು ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Died child Anusavya
ಸಾವನ್ನಪ್ಪಿದ ಕಂದಮ್ಮ ಅನುಸಾವ್ಯ

By

Published : Dec 11, 2022, 11:07 AM IST

ದಾವಣಗೆರೆ:ನೀರು ತುಂಬಿದ್ದ ಬಕೆಟ್​ಗೆ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗು ತಾರಾ ದಂಪತಿಯ 10 ತಿಂಗಳ ಮಗಳು ಅನುಸಾವ್ಯ ಮೃತಪಟ್ಟಿದೆ.

ಮಗು ಮನೆ ಮುಂದೆ ಆಟವಾಡುತ್ತಿದ್ದಾಗ ಪಕ್ಕದಲ್ಲೇ ನೀರು ತುಂಬಿಟ್ಟಿದ್ದ ಬಕೆಟ್​ಗೆ ಬಿದ್ದಿದೆ. ತಕ್ಷಣ ಯಾರೂ ಗಮನಿಸಿರಲಿಲ್ಲ. ಆಟವಾಡುತ್ತಿದ್ದ ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಿದಾಗ ಬಕೆಟ್​ನೊಳಗೆ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಪೋಷಕರು ಮಗುವನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಸಾವನ್ನಪ್ಪಿದೆ. ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಉಡುಪಿ: ಆಟ ಆಡೋಕೆ ತೆರಳಿದ್ದ ಬಾಲಕ ಹೊಂಡಕ್ಕೆ ಬಿದ್ದು ಸಾವು

ABOUT THE AUTHOR

...view details