ದಾವಣಗೆರೆ: ಜೋಕಾಲಿ ಆಟ ಆಡುತ್ತಿರುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಆಜಾದ್ ನಗರದ ಬಳಿಯ ಕೊರಚರಹಟ್ಟಿಯಲ್ಲಿ ನಡೆದಿದೆ.
ಸಂಜನ(11) ದುರ್ಘಟನೆಯಲ್ಲಿ ಸಾವನ್ನಪ್ಪಿದ ಬಾಲಕಿ.
ದಾವಣಗೆರೆ: ಜೋಕಾಲಿ ಆಟ ಆಡುತ್ತಿರುವಾಗ ಹಗ್ಗ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಆಜಾದ್ ನಗರದ ಬಳಿಯ ಕೊರಚರಹಟ್ಟಿಯಲ್ಲಿ ನಡೆದಿದೆ.
ಸಂಜನ(11) ದುರ್ಘಟನೆಯಲ್ಲಿ ಸಾವನ್ನಪ್ಪಿದ ಬಾಲಕಿ.
ಮೂರ್ತಪ್ಪ ಹಾಗೂ ಶಾಂತಮ್ಮ ದಂಪತಿಯ ಮೊದಲನೇ ಮಗಳಾಗಿದ್ದ ಸಂಜನ ಜಗಳೂರಿನ ದೇವಿಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಓದುತ್ತಿದ್ದಳು.ಎರಡು ದಿನಗಳ ಹಿಂದೆ ದೀಪಾವಳಿ ಹಬ್ಬಕ್ಕೆ ಬಹಳ ಖುಷಿಯಿಂದ ಆಕೆ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ತನ್ನ ತಮ್ಮನನ್ನು ಮಲಗಿಸಲು ಹಾಕಿದ್ದ ಜೋಕಾಲಿಯಲ್ಲಿ ಸಂಜನ ಆಗಾಗ ಆಟವಾಡುತ್ತಿದ್ದಳಂತೆ. ಆದರೆ, ದುರದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಕೊರಳಿಗೆ ಹಗ್ಗ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಸದ್ಯ ಬಾಲಕಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮಗಳನ್ನು ಕಳೆದುಕೊಂಡ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.