ಕರ್ನಾಟಕ

karnataka

ETV Bharat / state

ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣ: ಜ.26ಕ್ಕೆ 'ಉಪಾಧ್ಯಕ್ಷ' ತೆರೆಗೆ - Upadhyaksha movie

ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸಿರುವ 'ಉಪಾಧ್ಯಕ್ಷ' ಸಿನಿಮಾ ಇದೇ ಜ. 26ಕ್ಕೆ ತೆರೆಗಪ್ಪಳಿಸಲಿದೆ.

Upadhyaksha movie
'ಉಪಾಧ್ಯಕ್ಷ' ಚಿತ್ರತಂಡ

By ETV Bharat Karnataka Team

Published : Jan 17, 2024, 8:00 PM IST

'ಉಪಾಧ್ಯಕ್ಷ' ಚಿತ್ರತಂಡ

ದಾವಣಗೆರೆ: ನಾನು 'ಉಪಾಧ್ಯಕ್ಷ'ನಾಗಿ ಮೊದಲ ಬಾರಿಗೆ ನಾಯಕನಟನಾಗಿ ತೆರೆಮೇಲೆ ಬರಲಿದ್ದೇನೆ. ಅಧ್ಯಕ್ಷನಂತೆ ಈ ನಿಮ್ಮ ಉಪಾಧ್ಯಕ್ಷನನ್ನು ಹರಸಿ, ಹಾರೈಸಿ ಎಂದು ಉಪಾಧ್ಯಕ್ಷ ಚಿತ್ರದ ನಾಯಕ ನಟ ಚಿಕ್ಕಣ್ಣ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡರು.

ಇಂದು ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಮಾಪತಿ ಪ್ರೊಡಕ್ಷನ್​ನಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಡಬಲ್‌ ಮೀನಿಂಗ್ ಡೈಲಾಗ್​ಗಳಿಲ್ಲ. ಬದಲಿಗೆ ಸ್ವಕುಟಂಬ ಸಮೇತ ವೀಕ್ಷಣೆ ಮಾಡಬಹುದಾದ ಹಾಸ್ಯಭರಿತ ಚಿತ್ರವಿದು. ನಾನು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ. ಇದೇ ಮೊಟ್ಟ ಮೊದಲ ಬಾರಿಗೆ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದೇನೆ. ಸೈಡ್ ಆ್ಯಕ್ಟರ್ ಆಗಿ ನಟನೆ ಮಾಡುವುದು ಸುಲಭ. ಆದ್ರೆ ನಾಯಕ ನಟನಾಗಿ ನಟನೆ ಮಾಡುವುದು ಬಲು ಕಷ್ಟ ಎಂದರು. ಇದನ್ನೂ ಓದಿ:ಬಿಗ್​​ ಬಾಸ್​: ಮತ್ತೊಂದು ಟಾಸ್ಕ್‌, ಮತ್ತಷ್ಟು ರಿಸ್ಕ್‌; ಸಂಗೀತಾ - ವರ್ತೂರ್ ಅಸಮಾಧಾನ!

ಉಪಾಧ್ಯಕ್ಷ ಸಿನಿಮಾ 200ಕ್ಕೂ ಹೆಚ್ಚು ಸಿನಿಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ದಾವಣಗೆರೆ ಬೆಡಗಿ ಮಲೈಕಾ ಟಿ ವಸುಪಾಲ್ ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿಗಿದು ಚೊಚ್ಚಲ ಚಿತ್ರ. ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಇದೇ ಜನವರಿ 26ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ನಿಮ್ಮ ಚಿಕ್ಕಣ್ಣನಿಗೋಸ್ಕರ ಈ ಚಿತ್ರ ವೀಕ್ಷಿಸಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:'ಗುಂಟೂರ್ ಖಾರಂ' & 'ಹನುಮಾನ್': ಬಾಕ್ಸ್ ಆಫೀಸ್​ ಕಲೆಕ್ಷನ್​ ಹೀಗಿದೆ!

ABOUT THE AUTHOR

...view details