ಕರ್ನಾಟಕ

karnataka

ETV Bharat / state

ಸೂಳೆಕೆರೆಯಲ್ಲಿ ಜನರ ನಡುವೆಯೇ ಓಡಿ ಹೋದ ಚಿರತೆ: ವಿಡಿಯೋ ವೈರಲ್ - Cheeta ran between croud in Sulekere

ಸೂಳೆಕೆರೆಯ ಹಳೆ ಪ್ರವಾಸಿ ಮಂದಿರಲ್ಲಿ ಕಾಣಿಸಿಕೊಂಡ ಚಿರತೆ ನೂರಾರು ಜನರ ಮಧ್ಯೆಯೇ ಜಿಗಿದು ಪ್ರವಾಸಿ ಮಂದಿರದಿಂದ ಬಸವಪಟ್ಟಣ ಗುಡ್ಡದ ಕಡೆ ಓಡಿ ಹೋದ ವಿಡಿಯೋ ವೈರಲ್ ಆಗಿದೆ.

ಸೂಳೆಕೆರೆಯಲ್ಲಿ ಜನರ ಮಧ್ಯೆಯೇ ಓಡಿ ಹೋದ ಚಿರತೆ
ಸೂಳೆಕೆರೆಯಲ್ಲಿ ಜನರ ಮಧ್ಯೆಯೇ ಓಡಿ ಹೋದ ಚಿರತೆ

By

Published : Oct 11, 2020, 6:41 AM IST

ದಾವಣಗೆರೆ:ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ ಎಂಬ ಬಿರಿದು ಪಡೆದಿರುವ ಸೂಳೆಕೆರೆಯ ಪಾಳು ಬಿದ್ದ ಪ್ರವಾಸಿ ಮಂದಿರದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನರು ಗುಂಪುಗೂಡಿದ ಪರಿಣಾಮ ಜನಸಂದಣಿ ಮಧ್ಯೆಯೇ ಚಿರತೆ ಹಾರಿ ಓಡಿ ಹೋಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸೂಳೆಕೆರೆಯಲ್ಲಿ ಜನರ ಮಧ್ಯೆಯೇ ಓಡಿ ಹೋದ ಚಿರತೆ

ಸೂಳೆಕೆರೆ ಗುಡ್ಡದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಸೂಳೆಕೆರೆಯ ಹಳೆ ಪ್ರವಾಸಿ ಮಂದಿರಲ್ಲಿ ಕಾಣಿಸಿಕೊಂಡ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ನೂರಾರು ಜನರು ಸ್ಥಳದಲ್ಲಿ ಜಮಾವಣೆಗೊಂಡ ಕಾರಣ ಚಿರತೆ ಪ್ರವಾಸಿ ಮಂದಿರದಿಂದ ಬಸವಪಟ್ಟಣ ಗುಡ್ಡದ ಕಡೆ ಜನರ ಮಧ್ಯೆಯೇ ಜಿಗಿದು ಓಡಿ ಹೋದ ವಿಡಿಯೋ ವೈರಲ್ ಆಗಿದೆ.

ಬಸವಪಟ್ಟಣದ ಗುಡ್ಡದಿಂದ ಅಮ್ಮನಗುಡ್ಡದ ದೊಡ್ಡ ಕಾನನ ಪ್ರದೇಶದೊಳಗೆ ಹೋಗಿದೆ. ಆದರೂ ಮತ್ತೆ ಎಲ್ಲಿ ಚಿರತೆ ಪ್ರತ್ಯಕ್ಷವಾಗುತ್ತೋ ಎಂಬ ಆತಂಕದಲ್ಲಿ ಸೂಳೆಕೆರೆ ಹಾಗೂ ಬಸವಟ್ಟಣ ಗ್ರಾಮಸ್ಥರು ಭಯ ಭೀತಗೊಂಡಿದ್ದಾರೆ.

ABOUT THE AUTHOR

...view details