ದಾವಣಗೆರೆ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಚನ್ನಗಿರಿಯ 11 ಮಂದಿ ಪಾಲ್ಗೊಂಡಿದ್ದರು ಎಂಬುದು ಸುಳ್ಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟನೆ ನೀಡಿದ್ದಾರೆ.
ತಬ್ಲಿಘಿ ಧಾರ್ಮಿಕ ಸಭೆಗೆ ಚನ್ನಗಿರಿಯ ಮಂದಿ ಹೋಗಿಲ್ಲ: ಎಸ್ಪಿ ಸ್ಪಷ್ಟನೆ
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಗೆ ಚನ್ನಗಿರಿಯಿಂದ 11 ಮಂದಿ ಪಾಲ್ಗೊಂಡಿದ್ದರು ಎಂಬುದು ಸುಳ್ಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.
ಚನ್ನಗಿರಿಯ ಈ ಮಂದಿ ಸಭೆಗೆ ಹೋಗಿಲ್ಲ. ಫೆಬ್ರವರಿ 28ಬರಂದೇ ವಾಪಸ್ ಆಗಿದ್ದಾರೆ. ಇದಕ್ಕೂ ಮೊದಲು ನಿಜಾಮುದ್ದೀನ್ ದರ್ಗಾಕ್ಕೂ ಹೋಗಿದ್ದಾರೆ. ಬೇರೆ ಬೇರೆ ಮಸೀದಿಗಳಿಗೂ ಭೇಟಿ ಕೊಟ್ಟಿದ್ದಾರೆ. ಇವರು ಯಾರಿಗೂ ಕೊರೊನಾ ಸೋಂಕಿಲ್ಲ. ಗುಣಲಕ್ಷಣಗಳೂ ಇಲ್ಲ. ಆದ್ರೂ ಮಾಧ್ಯಮದಲ್ಲಿ ಸುದ್ದಿ ಬಂದಿದೆ ಎಂದಿದ್ದಾರೆ.
ಸರ್ಕಾರದ ಸೂಚನೆಯಂತೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಟುಂಬದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಬಗ್ಗೆ ಯಾರೂ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಮನವಿ ಮಾಡಿದ ಅವರು, ಚನ್ನಗಿರಿಯಲ್ಲಿ ನಾಲ್ಕು, ಅಕ್ರಮ ಮದ್ಯ ಮಾರಾಟ ಬಗ್ಗೆ 23ಪ್ರಕರಣ ದಾಖಲಾಗಿವೆ. ಲಾಕ್ ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ವರಿಕೆ ನೀಡಿದರು.