ಕರ್ನಾಟಕ

karnataka

ETV Bharat / state

ಚಂದ್ರು ಕೊಲೆ ಪ್ರಕರಣ: ಒಂದು ಕಾರು, ಒಂದು ಮೃತ ದೇಹದ ಸುತ್ತ ನೂರಾರು ಪ್ರಶ್ನೆಗಳು.. - ತುಂಗಾ ಮೇಲ್ದಂಡೆ ಕಾಲುವೆಯ ತಡೆಗೋಡೆ

ಕಳೆದ ಭಾನುವಾರ ನಾಪತ್ತೆಯಾಗಿದ್ದ ಚಂದ್ರಶೇಖರ್ ಕಾರು ಕಾಲುವೆಯ ತಡೆಗೋಡೆಗೆ ಅಪ್ಪಳಿಸಿ ಅಪಘಾತ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಶಾಸಕ ಎಂ ಪಿ ರೇಣುಕಾಚಾರ್ಯ ಇದು ವ್ಯವಸ್ಥಿತವಾಗಿ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ.

ಚಂದ್ರು
ಚಂದ್ರು

By

Published : Nov 4, 2022, 3:28 PM IST

ದಾವಣಗೆರೆ:ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರು ಸಮೇತ ಚಂದ್ರು ಮೃತದೇಹ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ಅಪಘಾತವೋ ಇಲ್ಲ ಸಹಜ ಸಾವೋ, ಕೊಲೆನೋ ಎಂಬುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಶಾಸಕ ರೇಣುಕಾಚಾರ್ಯ ಅವರು ಮಾತನಾಡಿದರು

ಐದು ದಿನಗಳಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಕೂಗಳತೆಯಲ್ಲಿರುವ ಹೆಚ್ ಕಡದಕಟ್ಟಿ ಹಾಗೂ ಸೊರಟೂರು ಗ್ರಾಮದ ಮಧ್ಯೆ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರು ಸಮೇತ ಚಂದ್ರು ಮೃತ ಕಳೆದ ದಿನ ಸಂಜೆ ದೇಹ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಕಳೆದ ಭಾನುವಾರ ನಾಪತ್ತೆಯಾಗಿದ್ದ ಚಂದ್ರಶೇಖರ್ ಕಾರು ಕಾಲುವೆಯ ತಡೆಗೋಡೆಗೆ ಅಪ್ಪಳಿಸಿ ಅಪಘಾತ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಶಾಸಕ ಎಂ ಪಿ ರೇಣುಕಾಚಾರ್ಯ ಇದು ವ್ಯವಸ್ಥಿತವಾಗಿ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ. ಚಂದ್ರು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ನೇತೃತ್ವದಲ್ಲಿ ಶವ ಮರಣೋತ್ತರ ಪರೀಕ್ಷೆ ‌ಮಾಡಲಾಗಿದ್ದು, ರಿಪೋರ್ಟ್ ಪೊಲೀಸರ ಕೈಸೇರಬೇಕಿದೆ.‌

ಕಾಲುವೆ ತಡೆಗೋಡೆ ಕಾರು ಡಿಕ್ಕಿ - ಮೂಡಿದ ಅನುಮಾನ..ಭಾನುವಾರದಂದು ಶಿವಮೊಗ್ಗದ ಗೌರಿಗದ್ದೆಗೆ ವಿನಯ್ ಗುರುಜೀ ಭೇಟಿಯಾಗಲು ಹೋಗಿದ್ದ ಚಂದ್ರು ಅಲ್ಲಿಂದ ಮರಳಿ ಬರ್ತಾ ತನ್ನ ಸ್ನೇಹಿತ‌ ಕಿರಣ್ ನನ್ನು ಶಿವಮೊಗ್ಗದಲ್ಲಿ ಇಳಿಸಿದ್ದಾನೆ. ಬಳಿಕ ಅಲ್ಲಿಂದ ಒಬ್ಬನೇ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಚಂದ್ರು ಕಾರು ನ್ಯಾಮತಿಯ ಸುರಹೊನ್ನೆ ಬಳಿ ಪಾಸ್ ಆಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆದರೆ, ಆ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗದರೆ ಕಾರು ಅಪಘಾತ ಆಗಿದ್ದರೆ ಎರಡು ಡೆಡ್ ಬಾಡಿ ಸಿಗಬೇಕಾಗಿತ್ತು. ಆದರೆ, ಇಲ್ಲಿ ಚಂದ್ರುವಿನ ಶವ ಮಾತ್ರ ಪತ್ರೆಯಾಗಿದೆ. ಇದಲ್ಲದೇ ಕಾರಿನ ಡ್ರೈವಿಂಗ್ ಸೀಟಿನಲ್ಲಿದ್ದ ಚಂದ್ರುವಿನ ಶವ ಡ್ರೈವಿಂಗ್ ಸೀಟಿನಲ್ಲಿರಬೇಕಿತ್ತು. ಕಾರು ಮೇಲೆತ್ತಿದಾಗ ಶವ ಹಿಂಬದಿ ಸೀಟಿನಲ್ಲಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನು ಇದು ಅಪಘಾತ ಆಗಿದ್ರೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಇಬ್ಬರ ಪೈಕಿ ಚಂದ್ರು ಶವ ಪತ್ತೆಯಾದರೆ ಮತ್ತೋರ್ವರ ಶವ ಎಲ್ಲಿ ಹೋಯಿತು? ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾರಿನ ಬಿಡಿಭಾಗಗಳಿಂದ ಕಾರು ಪತ್ತೆ..ಹೌದು, ತುಂಗಾ ಮೇಲ್ದಂಡೆ ಕಾಲುವೆಯ ತಡೆಗೋಡೆಗೆ ಕಾರು ಡಿಕ್ಕಿಯಾಗಿರುವ ರೀತಿಯಲ್ಲಿ ಸಾಕಷ್ಟು ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದರಿಂದ ಕಾರು ಕಾಲುವೆಗೆ ಬಿದ್ದಿದೆ‌ ಎಂದು ಅನುಮಾನದಿಂದ ಪರಿಶೀಲನೆ ನಡೆಸಿದಾಗ ಕ್ರೇಟಾ ಕಾರು ಪತ್ತೆಯಾಗಿದೆ. ಕಾರು ಹೊರ ತೆಗೆದಾಗ ಶವ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದೆ. ಆದರೆ, ಕ್ರೆಟಾ ಬಿಎಸ್ 6 ಮಾಡೆಲ್ ಕಾರಿನಲ್ಲಿ ಸಾಮಾನ್ಯವಾಗಿ ಸೀಟ್ ಬೆಲ್ಟ್ ಹಾಕದಿದ್ದರೆ ಏರ್ ಬ್ಯಾಗ್ ಓಪನ್ ಆಗುವುದಿಲ್ಲ, ‌ಹೀಗಿರುವಾಗ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು, ಹಿಂಬದಿ ಸೀಟಿನಲ್ಲಿ ಶವ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕೈಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆಂದು ದೂರು..:ಚಂದ್ರಶೇಖರ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ತುಂಗಾ ನಾಲೆಯಲ್ಲಿ ಪತ್ತೆಯಾದ ಕಾರಿನಲ್ಲಿ ಶವ ಹಿಂಬದಿ ಸೀಟಿನಲ್ಲಿತ್ತು. ಕೈಕಾಲು ಕಟ್ಟಿ ಹಾಕಿ ತಲೆಯ ಭಾಗಕ್ಕೆ ಆಯುಧಗಳಿಂದ ಹಲ್ಲೆ ಮಾಡಲಾಗಿದೆ ಎಂದು ಚಂದ್ರಶೇಖರ್ ಕುಟುಂಬಸ್ಥರು ದೂರು ನೀಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಐಪಿಸಿ 302(ಕೊಲೆ), 201(ಸಾಕ್ಷ್ಯನಾಶ), ಹಾಗು 427(ವಾಹನ ಜಖಂ) ಕಲಂಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಸಾವನಪ್ಪಿದ ಚಂದ್ರಶೇಖರ್ ಅವರ ತಂದೆ ಎಂ ಪಿ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ಕಾರನ್ನು ಪತ್ತೆ ಮಾಡಿದ್ಸು ಡ್ರೋಣ್ ಕ್ಯಾಮರಾ..ಸತತ ಐದು ದಿನಗಳಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಸಾವು ಅನುಮಾನಕ್ಕೆ ಕಾರಣವಾಗಿತ್ತು. ಚಂದ್ರುಗಾಗಿ ಶಾಸಕ ರೇಣುಕಾಚಾರ್ಯ ಬೆಂಬಲಿಗರು ನಿರಂತರವಾಗಿ ಹುಡುಕಾಟ ನಡೆಸಿದ್ದರು.‌ ಹೊನ್ನಾಳಿಯ ಕೆಲ ಬಿಜೆಪಿ ಕಾರ್ಯಕರ್ತರು ಕೂಡ ಶೋಧಕ್ಕೆ ಕೈಹಾಕಿದ್ದರು. ಡ್ರೋಣ್ ಪಡೆದು ಶೋಧ ಕಾರ್ಯಾಚರಣೆಗೆ ಕೈ ಹಾಕಿದ್ದರು.‌ ಆಗಾ ಸೊರಟೂರು ಬಳಿಯ ತುಂಗಾ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದವು. ನಂತರ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಕಾರು ಮೇಲೆತ್ತಿದಾಗ ಚಂದ್ರು ಶವ ಕಾರಿನ‌ ಹಿಂಬದಿ ಇರುವುದು ಪತ್ತೆಯಾಗಿತ್ತು.

ಕಿರಣ್ ಹಾಗೂ ಚಂದ್ರು ಸ್ನೇಹಿತರು..:ಬಂಧಿತ‌ ಮೃತ ಚಂದ್ರಶೇಖರ್​ನ ಸ್ನೇಹಿತ ಕಿರಣ್​ನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಿರಣ್ ಶಿವಮೊಗ್ಗದ ಕೋರ್ಟ್​ನಲ್ಲಿ ಡಿ ದರ್ಜೆಯ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಮೃತ ಚಂದ್ರುಗೆ ಶಿವಮೊಗ್ಗ ಮೂಲದ ಕಿರಣ್ ಗೌರಿಗದ್ದೆಯಲ್ಲಿ ಒಂಬತ್ತು ತಿಂಗಳಿಂದ ಪರಿಚಯವಾಗಿ ಸ್ನೇಹ ಬೆಳೆದಿತ್ತು.‌ ವಿನಯ್ ಗುರೂಜಿ ಅವರನ್ನು ಭೇಟಿಯಾಗಲು ಹೋಗುವಾಗ ಪ್ರತಿಬಾರಿಯೂ ಚಂದ್ರು ಸ್ನೇಹಿತ ಕಿರಣ್ ನನ್ನು ಕರೆದೊಯ್ಯುತ್ತಿದ್ದನು.

ಓದಿ:ನಮಗೆ ದೇಶ ಮುಖ್ಯ, ಜಾತಿ ಅಲ್ಲ, ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ: ಶಾಸಕ ರೇಣುಕಾಚಾರ್ಯ

ABOUT THE AUTHOR

...view details