ಕರ್ನಾಟಕ

karnataka

ETV Bharat / state

ನಾಳೆ ಚಂದ್ರಯಾನ-3 ಲ್ಯಾಂಡ್ ಆಗುವ ದೃಶ್ಯ ನೋಡಲು ದಾವಣಗೆರೆ ವಿದ್ಯಾರ್ಥಿಗಳು ಕಾತುರ - ಈಟಿವಿ ಭಾರತ್​ ಕನ್ನಡ ನ್ಯೂಸ್

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನಾ-3 ಯಶಸ್ವಿಯಾಗಲಿ ಎಂದು ನೂರಾರು ಪುಠಾಣಿಗಳು ಶುಭಾ ಹಾರೈಸಿದ್ದಾರೆ.

ಚಂದ್ರಯಾನಾ-3
ಚಂದ್ರಯಾನಾ-3

By ETV Bharat Karnataka Team

Published : Aug 22, 2023, 10:44 PM IST

Updated : Aug 22, 2023, 11:01 PM IST

ಚಂದ್ರಯಾನ-3 ಯಶಸ್ವಿಯಾಗಲಿ- ಮಕ್ಕಳ ಹಾರೈಕೆ

ದಾವಣಗೆರೆ : ನಗರದ ಶಾಮನೂರು ಬಳಿಯ ಡಾಲರ್ಸ್ ಕಾಲೋನಿಯಲ್ಲಿರುವ ಶ್ರೀಮತಿ ಶ್ರೀದೇವಿ ತಿಮ್ಮರೆಡ್ಡಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಶ್ರೀಹರಿಕೋಟಕ್ಕೆ ತೆರಳಿ ಚಂದ್ರಯಾನ-3 ಉಡಾವಣೆ ವೇಳೆ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡಿದ್ದರು. ಇದೀಗ ಬುಧವಾರ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಲ್ಯಾಂಡ್ ಆಗುವ ದೃಶ್ಯ ನೋಡಲು ಕಾತರರಾಗಿದ್ದು, ಶುಭಾಶಯ ಕೋರಿದ್ದಾರೆ.

ಈಗಾಗಲೇ ಚಂದ್ರನ ಮೇಲೆ ಲ್ಯಾಂಡ್ ಆಗುವ ದೃಶ್ಯವನ್ನು ವೀಕ್ಷಿಸಲು ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಿದ್ದು, ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜುಲೈ 14 ರಂದು ಶ್ರೀಹರಿಕೋಟಾಕ್ಕೆ ಈ ಶಾಲೆಯ ನೂರು ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲರಾದ ಮಹಾಂತೇಶ್ ಕಮ್ಮಾರ್ ರವರು ಭೇಟಿ ನೀಡಿ ಮಕ್ಕಳೊಂದಿಗೆ ಚಂದ್ರಯಾನ 3 ಪಿಎಸ್​ಎಲ್​ವಿ ಲಾಂಚಿಂಗ್ ದೃಶ್ಯ ವೀಕ್ಷಿಸಿದ್ದರು.

ಈ ವೇಳೆ ಶಾಲೆಯ ಪ್ರಾಂಶುಪಾಲರಾದ ಮಹಾಂತೇಶ್ ಕಮ್ಮಾರ್ ರವರು ಪ್ರತಿಕ್ರಿಯಿಸಿ ನಾಳೆ ನಡೆಯುವ ಚಂದ್ರ ಚುಂಬನ ಯಶಸ್ವಿಯಾಗಲೆಂದು ನಾಳೆ ಶಾಮನೂರು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಬಳಿಕ ಅದ್ಭುತ ಕ್ಷಣವನ್ನು ನೋಡಲು ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ಶಾಮನೂರು ಸರ್ಕಲ್ ನಲ್ಲಿ ಚಂದ್ರಯಾನ ಬಗ್ಗೆ ಜನಜಾಗೃತಿ ಕೂಡ ಮಾಡಲಾಗುವುದು.

ಸೆಲ್ಫಿ ಸ್ಟಿಕ್ ಹಿಡಿದು ಗುಡ್ ಲಕ್ ಇಸ್ರೋ ಫ್ರೇಮ್ ನೊಂದಿಗೆ ಫೋಟೊ ಕ್ಲಿಕ್ ಮಾಡಿಕೊಳ್ಳಬಹುದು. ಅಲ್ಲದೆ, ಇಸ್ರೋ ಚಿಹ್ನೆ ಹಿಡಿದು ಬೃಹತ್ ಗುಡ್ ಲಕ್ ಸಹಿ ಸಂಗ್ರಹಿಸುವ ಅಭಿಮಾನ ಕೂಡ ಹಮ್ಮಿಕೊಳ್ಳಲಾಗಿದೆ. ಜುಲೈ 14 ರಂದು 90 ಜನ ವಿದ್ಯಾರ್ಥಿಗಳೊಂದಿಗೆ ಶ್ರೀ ಹರಿಕೋಟಕ್ಕೆ ತೆರಳಿ ಲಾಚಿಂಗ್ ದೃಶ್ಯವನ್ನು ವೀಕ್ಷಣೆ ಮಾಡಿದ್ದೇವೆ. ಇದೀಗ ಚಂದ್ರಯಾನ-3 ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಬೇಕೆಂದು ನಮ್ಮ ಆಶೆಯವಾಗಿದೆ ಎಂದರು.

ಅಂದು ಶ್ರೀಹರಿಕೋಟಕ್ಕೆ ಹೋಗಿದ್ದ ವಿದ್ಯಾರ್ಥಿಗಳಾದ ಸಮನ್ವೀತ ಹಾಗು ಸಮನ್ವೀತ ಮಾತನಾಡಿ , ಚಂದ್ರಯಾನ-3 ಲಾಂಚಿಂಗ್​ ಆಗುವುದನ್ನು ನೋಡಿರುವುದನ್ನು ನಾವು ಜೀವನದಲ್ಲಿ ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿರುತ್ತೇವೆ. ಬಾಹ್ಯಕಾಶಕ್ಕೆ ಮೊದಲ ದೇಶ ನಮ್ಮದೆ ಎಂಬುದನ್ನು ಎಲ್ಲರು ನೆನಪಿನಟ್ಟಿರುತ್ತಾರೆ. ಲಾಂಚಿಂಗ್​ ಯಾವುದೇ ಅಡೆ ತಡೆ ಇಲ್ಲದೆ ಆಗಿದೆ. ಅದರಂತೆ ಲ್ಯಾಂಡಿಂಗ್​ ಕೂಡ ಚಂದ್ರ ಮೇಲೆ ಆಗಲಿದೆ ಎಂಬ ನಂಬಿಕೆ ಇದೆ ಎಂದು ಗುಡ್ ಲಕ್ ಇಸ್ರೋ, ಗುಡ್ ಲಕ್ ಲ್ಯಾಂಡರ್ ಎಂದು ಚಂದ್ರಯಾನ-3 ಕ್ಕೆ ವಿದ್ಯಾರ್ಥಿಗಳು ಶುಭ ಕೋರಿದರು.

ಕೊಪ್ಪಳದಲ್ಲಿ ಮಕ್ಕಳಿಂದ ಶುಭಾ ಹಾರೈಕೆ, ಪ್ರಾರ್ಥನೆ :ಬಾಹ್ಯಾಕಾಶ ಸಂಶೋಧಾನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನಾ-3 ಯಶಸ್ವಿಯಾಗಲಿ ಎಂದು ನೂರಾರು ಪುಠಾಣಿಗಳು ಶುಭಾ ಹಾರೈಸಿದ್ದಾರೆ. ನಗರದ ನಾನಾ ಮಸೀದಿ, ಚರ್ಚ್​, ದೇವಸ್ಥಾನದಲ್ಲಿ ಚಂದ್ರಯಾನಾ-3ರ ಯಶಸ್ಸಿಗೆ ಪ್ರಾರ್ಥನೆ ಮಾಡಲಾಗುತ್ತಿದೆ.

ಪಂಪಾಪನಗರದ ಕೊಟ್ಟೂರೇಶ್ವರ ಪಿಯು ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿನ ವಿದ್ಯಾರ್ಥಿಗಳು ಮತ್ತು ಜಯನಗರದ ಸೆಂಟ್ಫಾಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳು ಚಂದ್ರಾಯಾನದ ನಾನಾ ಹಂತದಲ್ಲಿನ ಛಾಯಾಚಿತ್ರಗಳನ್ನು ಹಿಡಿದು ಪ್ರದರ್ಶನ ಮಾಡಿದ ಮಕ್ಕಳು, ಚಂದ್ರಾಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ರಾಕೆಟ್, ಲಾಂಚರ್, ಲ್ಯಾಂಡ್ ರೋವರ್ ಚಿತ್ರಗಳು ಮಕ್ಕಳ ಕೈಯಲ್ಲಿ ರಾರಾಜಿಸಿದವು. ಇದಕ್ಕೂ ಮೊದಲು ಚಂದ್ರಯಾನಾದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಗುರುವಾರವೂ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸರ್ವೇಶ ವಸ್ತ್ರದ ತಿಳಿಸಿದ್ದಾರೆ

ವಿಶೇಷ ಪ್ರಾರ್ಥನೆ :ಜಾಮೀಯಾ ಮಸೀದಿಯಲ್ಲಿ ಸಂಜೆ 7 ವೇಳೆ ಚಂದ್ರಯಾನಾ-3 ಯಶಸ್ವಿಯಾಗಲಿ ಎಂದು ಸಾಮೂಹಿಕ ವಿಶೇಷ ಪ್ರಾರ್ಥನೆ ಮಾಡಲಾಗಿದೆ ಎಂದು ನಗರಸಭೆಯ ಸದಸ್ಯ ಉಸ್ಮಾನ್ ಬಿಚ್ಚುಗತ್ತಿ ತಿಳಿಸಿದ್ದಾರೆ. ಅಲ್ಲದೆ ಕೊಪ್ಪಳ-ರಾಯಚೂರು ರಸ್ತೆಯಲ್ಲಿರುವ ಬಾಲಯೇಸು ಮಂದಿರದಲ್ಲಿ ಫಾದರ್ ವೆಂಕಟೇಶ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಚರ್ಚೆನ ಅನುಯಾಯಿ ಸಾಮಯವೆಲ್ ಸಲಾಡೀನ್ ತಿಳಿಸಿದ್ದಾರೆ. ಅಲ್ಲದೆ, ಕೋಟೆ ಆಂಜನೇಯ ದೇವಸ್ಥಾನ, ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಇದನ್ನೂ ಓದಿ :ನಾಳಿನ ಚಂದ್ರಯಾನ-3 ಲ್ಯಾಂಡಿಂಗ್ ಕುತೂಹಲ ಇಡೀ ಮನುಕುಲಕ್ಕಿದೆ: ಬಾಹ್ಯಾಕಾಶ ತಜ್ಞ ರಾಘವೇಂದ್ರ ಕುಲಕರ್ಣಿ

Last Updated : Aug 22, 2023, 11:01 PM IST

ABOUT THE AUTHOR

...view details