ಕರ್ನಾಟಕ

karnataka

ETV Bharat / state

ಚಂದ್ರು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ: ಹರಿದು ಬಂದ ಜನಸಾಗರ - ಮೃತ ಚಂದ್ರಶೇಖರ್​

ಮೃತ ಚಂದ್ರಶೇಖರ್​ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಎಂಟು ಕಿಲೋ ಮೀಟರ್​ ಸಾಗಿದೆ. ಇನ್ನೂ ಮೆರವಣಿಗೆಗೆ ಜನಸಾಗರವೇ ಹರಿದುಬಂದಿದ್ದು, ವೀರಶೈವ ಲಿಂಗಾಯತ ಬೇಡಜಂಗಮ ಸಂಪ್ರದಾಯದದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ಚಂದ್ರು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ
ಚಂದ್ರು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ

By

Published : Nov 4, 2022, 5:38 PM IST

Updated : Nov 4, 2022, 5:56 PM IST

ದಾವಣಗೆರೆ: ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್​ ಪಾರ್ಥಿವ ಶರೀರದ ಅಂತಿಮ ಯಾತ್ರಾ ಮೆರವಣಿಗೆ ಎಂಟು ಕಿಲೋ ಮೀಟರ್ ಸಾಗಿದೆ. ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಶಾಸಕ ಎಂಪಿ ರೇಣುಕಾಚಾರ್ಯ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದೆ.

ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್​ಗೆ ಚಂದ್ರು ಪಾರ್ಥಿವ ಶರೀರ ತಲುಪುತ್ತಿದ್ದಂತೆ, ಚಂದ್ರು ಸ್ನೇಹಿತರು ಹಾಗೂ ಬಿಜೆಪಿ ಕಾರ್ಯಕರ್ತರು ಚಂದ್ರುಗೆ ಜೈಕಾರ ಹಾಕಿದರು. ಇದಲ್ಲದೇ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಕೂಡ ಭಾಗಿಯಾಗಿ ಹೆಜ್ಜೆ ಹಾಕಿದರು.

ಚಂದ್ರು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ

ಅಂತ್ಯಸಂಸ್ಕಾರಕ್ಕೆ ಕುಂದೂರಿನಲ್ಲಿ ಸಿದ್ಧತೆ: ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಹುಟ್ಟೂರಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಚಂದ್ರು ಅಂತ್ಯಸಂಸ್ಕಾರ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ. ಮೊದಲಿಗೆ ಚಂದ್ರುಗೆ ಎಕ್ಕೆಗಿಡದೊಂದಿಗೆ ಮದುವೆ ಮಾಡಿಸಲು ಕೂಡ ಸಿದ್ಧತೆ ನಡೆದಿದ್ದು, ಎಕ್ಕೆಗಿಡಕ್ಕೆ ಸಿಂಗಾರ ಮಾಡಲಾಗಿದೆ.

ಇದನ್ನೂ ಓದಿ:ಚಂದ್ರಶೇಖರ್ ಮೃತದೇಹ ವೀಕ್ಷಿಸಿದ ಎಡಿಜಿಪಿ ಅಲೋಕ್ ಕುಮಾರ್

ಇದಾದ ಬಳಿಕ ವೀರಶೈವ ಲಿಂಗಾಯತ ಬೇಡಜಂಗಮ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ. ಮೃತ ಚಂದ್ರು ಅಜ್ಜ, ಅಜ್ಜಿ ಸಮಾಧಿ ಮಧ್ಯೆ ಚಂದ್ರು ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

Last Updated : Nov 4, 2022, 5:56 PM IST

ABOUT THE AUTHOR

...view details