ದಾವಣಗೆರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸಾವರ್ಕರ್ ಬಗ್ಗೆ ಆಡಿದ ಮಾತಿನಿಂದ ನಾವು ಒಗ್ಗಟ್ಟಾಗುತ್ತಿದ್ದೇವೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ದರ್ಶನ ಪಡೆದು ಪೂಜೆ ಸಲ್ಲಿಸಿ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾವರ್ಕರ್ ಬಗ್ಗೆ ಆಡಿದ ಮಾತಿನಿಂದ ನಾವೆಲ್ಲಾ ಹೀಗೆ ಸೇರಿದ್ದೇವೆ. ಅದಕ್ಕಾಗಿ ಸಿದ್ದರಾಮಯ್ಯಗೆ ಧನ್ಯವಾದ ಹೇಳಬೇಕು, ಅವರು ಹಿಂದೂಗಳ ಭಾವನೆ ಕೆಣಕಿದ್ದರಿಂದ ನಾವೆಲ್ಲಾ ಇಷ್ಟು ಒಗ್ಗಟ್ಟಾಗಲು ಪ್ರೇರಣೆಯಾಯಿತು ಎಂದರು.
ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಇದನ್ನೂ ಓದಿ:ಹಿಂದೂಗಳ ರಕ್ಷಣೆ ನೀವು ಮಾಡುತ್ತಿರೋ, ಇಲ್ಲ ನಾವೇ ಮಾಡಿಕೊಳ್ಳಬೇಕೋ: ಚಕ್ರವರ್ತಿ ಸೂಲಿಬೆಲೆ ಕಿಡಿ
ಸಾವರ್ಕರ್ ಇತಿಹಾಸ ಸಾರುವ 2 ಲಕ್ಷ ಪುಸ್ತಕಗಳು ಪ್ರಿಂಟ್ ಆಗಿ ಸಾರ್ವಜನಿಕರ ಕೈ ಸೇರಿವೆ. ಬೀದರ್ನಿಂದ ಚಾಮರಾಜನಗರದ ವರೆಗೂ ಗಣೇಶೋತ್ಸವದಲ್ಲಿ ಭಾರತ ಮಾತೆ, ಸಾವರ್ಕರ್ ಫೋಟೋ ಇಡಲಾಗಿದೆ. ಸಾವರ್ಕರ್ ವ್ಯಕ್ತಿತ್ವದ ಬಗ್ಗೆ ಅರಿವಿಲ್ಲದ ಆಯೋಗ್ಯರು ಮಾತ್ರ ಅವರಿಗೆ ಬೈಯ್ಯುತ್ತಾರೆ. ಸಾವರ್ಕರ್ ಒಬ್ಬ ಅದ್ಭುತ ಚಿಂತಕ, ಅಪ್ರತಿಮ ಸಾಹಿತಿ, ಕ್ರಾಂತಿಕಾರಿ. ಹತ್ತಾರು ಪುಸ್ತಕ ಬರೆದಿದ್ದಾರೆ. ಆದ್ರೆ, ನೆಹರು ಒಂದೂ ಪುಸ್ತಕ ಬರೆದ ನಿದರ್ಶನವಿಲ್ಲ ಎಂದರು.
ಇದನ್ನೂ ಓದಿ:ಚಕ್ರವರ್ತಿ ಸೂಲಿಬೆಲೆ ಅವರಿಂದ ಕೋಮು ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದೆ : ಲೋಕೇಶ್