ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಹೈಟೆಕ್ ಆಸ್ಪತ್ರೆ ವೈದ್ಯರ ಸಾಧನೆ - pregnant operation

ಕೊರೊನಾ ಸೋಂಕಿಗೆ ತುತ್ತಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

corona infected pregnant
ಕೊರೊನಾ ಸೋಂಕಿತ ಗರ್ಭಿಣಿ

By

Published : Jul 30, 2020, 12:43 PM IST

ದಾವಣಗೆರೆ:ಕೊರೊನಾ‌ ಸೋಂಕಿಗೆ ತುತ್ತಾಗಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 35 ವರ್ಷದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ.

ಮೊದಲಿಗೆ ಈ ಮಹಿಳೆಯಲ್ಲಿ ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಿಜೇರಿಯನ್ ಮಾಡುವುದು ತುಂಬಾ ಕಷ್ಟವಿತ್ತು. ಆದರೆ, ಎಸ್​ಎಸ್ ಹೈಟೆಕ್ ಆಸ್ಪತ್ರೆಯ ವೈದ್ಯರು ಕಠಿಣ ಪರಿಸ್ಥಿತಿಯಲ್ಲಿ ರೋಗಿ ಹಾಗೂ ಮಗುವನ್ನು ಬದುಕಿಸಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್​ ತಿಳಿಸಿದ್ದಾರೆ.

ಎಸ್​ ಎಸ್​​ ಆಸ್ಪತ್ರೆ ವೈದ್ಯರ ಸಾಧನೆ ಕುರಿತು ಎಸ್​ ಎಸ್​ ಮಲ್ಲಿಕಾರ್ಜುನ ಮಾಹಿತಿ

ಜುಲೈ 8ರಂದು ಕೊರೊನಾ ಸೋಂಕು ಬಂದಿದ್ದ ಗರ್ಭಿಣಿಯನ್ನು ಎಸ್ಎಸ್ ಆಸ್ಪತ್ರೆಗೆ ಶಿಫಾರಸು ಮಾಡಿ ಸ್ಥಳಾಂತರಿಸಲಾಗಿತ್ತು. ಹೈಫ್ಲೋ ಆಕ್ಸಿಜನ್ ಹೊರತಾಗಿಯೂ ಉಸಿರಾಟ ತೊಂದರೆ ಇದ್ದ ಕಾರಣ ಜುಲೈ 10ರಂದು ವೆಂಟಿಲೇಟರ್ ಅಳವಡಿಸಲಾಯಿತು. ಆಮ್ಲಜನಕ ಕೊರತೆಯಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇದ್ದ ಕಾರಣ ತುರ್ತು ಶಸ್ತ್ರಚಿಕಿತ್ಸೆ ಮಾಡಿ ಹೆಣ್ಣು ಮಗುವನ್ನು ಹೊರ ತೆಗೆಯಲಾಯಿತು.

ತಾಯಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿಸಿದ ನಾಲ್ಕು ದಿನಗಳ ಬಳಿಕ ಗುಣಮುಖರಾದರು‌. ಈಗ ತಾಯಿ ಕೊರೊನಾದಿಂದ ಮುಕ್ತರಾಗಿದ್ದು, ಮಗುವಿಗೆ ನೆಗೆಟಿವ್ ಬಂದಿದೆ. ಈಗ ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪಷ್ಟ ಪಡಿಸಿದ್ದಾರೆ. ಮಗು ಕೂಡಾ ಅವಧಿಗೆ ಮುನ್ನ ಜನಿಸಿದ್ದರಿಂದ ಉಸಿರಾಟದ ತೊಂದರೆಯಿಂದ ಬಳಲುತಿತ್ತು. ಮೂರು ದಿನಗಳ ಕಾಲ "ಸರ್ಫೆಕ್ಟೆಂಟ್" ಚಿಕಿತ್ಸೆ ನೀಡಿದ ಪರಿಣಾಮ ಮಗು ಕೂಡಾ ಆರೋಗ್ಯವಾಗಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ಮಾತನಾಡಿ, ಈ ರೋಗಿಯ ಚಿಕಿತ್ಸೆಯಲ್ಲಿ ಆಸ್ಪತ್ರೆಯ ಎಲ್ಲಾ ವಿಭಾಗದ ತಜ್ಞರು ಕಾರ್ಯನಿರ್ವಹಿಸಿದ್ದಾರೆ. ಮೆಡಿಸಿನ್ ವಿಭಾಗದ ಡಾ.ಮಧು ನವೀನ್ ರೆಡ್ಡಿ, ಡಾ.‌ಶ್ರೀಹರ್ಷ, ಅನಸ್ತೇಶಿಯಾ ವಿಭಾಗದ ಡಾ. ಅರುಣ್ ಕುಮಾರ್ ಅಜ್ಜಪ್ಪ, ಡಾ. ಕಿರಣ್, ಓಬಿಜಿ ವಿಭಾಗದ ಡಾ. ಪ್ರೇಮಾ ಪ್ರಭುದೇವ್, ಪಲ್ಮೋನೋಲಜಿಯ ಡಾ. ಅಜಿತ್, ಡಾ. ಪ್ರಿಯದರ್ಶಿನಿ, ತುರ್ತು ಚಿಕಿತ್ಸೆ ವಿಭಾಗದ ಡಾ. ನರೇಂದ್ರ, ಡಾ. ಗಣೇಶ್, ಮಕ್ಕಳ ವಿಭಾಗದ ಡಾ. ಕೆ. ಕಾಳಪ್ಪನವರ್, ಡಾ.‌ಲತಾ, ಡಾ. ವೀರೇಶ್ ಬಾಬು, ರೇಡಿಯಾಲಜಿ ವಿಭಾಗದ ಡಾ. ಅಖಿಲ್ ಕುಲಕರ್ಣಿ ಶ್ರಮ ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

500 ಬೆಡ್​​ಗಳಿವೆ, ಎಷ್ಟೇ ರೋಗಿಗಳು ಬಂದ್ರೂ ಚಿಕಿತ್ಸೆ..!

ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಗಳಲ್ಲಿ 500 ಬೆಡ್​​ಗಳಿವೆ. ಎಷ್ಟೇ ರೋಗಿಗಳು ಬಂದರೂ ಸೂಕ್ತ ಚಿಕಿತ್ಸೆ ನೀಡಲಾಗುವುದು. ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ನಮ್ಮಲ್ಲಿ ಒಟ್ಟು 35 ವೆಂಟಿಲೇಟರ್​ಗಳು ಇದ್ದು, ಇನ್ನೂ 35 ವೆಂಟಿಲೇಟರ್ ಖರೀದಿಸಲಾಗುವುದು. ಹೈಫ್ಲೋ ನೇಸಲ್ ಆಕ್ಸಿಜನ್ ಯಂತ್ರ ಒಂದಕ್ಕೆ ಮೂರುವರೆ ಲಕ್ಷ ರೂಪಾಯಿ ಇದ್ದು, ಹತ್ತು ಯಂತ್ರಗಳನ್ನು‌ ಖರೀದಿಸಲು ಸಿದ್ಧರಿದ್ದೇವೆ ಎಂದು ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.

ABOUT THE AUTHOR

...view details