ಕರ್ನಾಟಕ

karnataka

ETV Bharat / state

ದಾವಣಗೆರೆಗೆ ಮಂತ್ರಿಗಿರಿ ಸಿಗದಿರುವುದು ಬೇಸರ ತಂದಿದೆ: ಸಂಸದ ಜಿಎಂ ಸಿದ್ದೇಶ್ವರ್ - GM Sidheshwhar

ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಇಷ್ಟು ಸಮಯ ಕಳೆದರೂ ಸಚಿವ ಸ್ಥಾನ ವಂಚಿತ ಶಾಸಕರ ಹಗೆತನ ಮಾತ್ರ ಇನ್ನು ಮಾಸಿಲ್ಲ. ಸಂಸದ ಜಿಎಂ ಸಿದ್ದೇಶ್ವರ್ ಇಂದು ದಾವಣಗೆರೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಸಚಿವ ಸ್ಥಾನ ಸಿಗದಿರುವುದು ಬೇಸರ ತಂದಿದೆ ಎಂದಿದ್ದಾರೆ.

ಜಿಎಂ ಸಿದ್ದೇಶ್ವರ್ ಬೇಸರ

By

Published : Oct 4, 2019, 8:04 PM IST

ದಾವಣಗೆರೆ:ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾಗಿರುವ ದಾವಣಗೆರೆಗೆ ಸಚಿವ ಸ್ಥಾನ ಸಿಗದೇ ಇರುವಂತಹದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.‌ ಇದಕ್ಕೆ ಧ್ವನಿಗೂಡಿಸಿರುವ ಸಂಸದ ಜಿಎಂ ಸಿದ್ದೇಶ್ವರ್ ದಾವಣಗೆರೆಗೆ ಮಂತ್ರಿ ಸ್ಥಾನ ಸಿಗದೇ ಇರುವುದು ನೋವು ತಂದಿದೆ ಎಂದಿದ್ದಾರೆ.

ಜಿಎಂ ಸಿದ್ದೇಶ್ವರ್ ಬೇಸರ

ದಾವಣಗೆರೆ ನಗರದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದಾವಣಗೆರೆಗೆ ಸಚಿವ ಸ್ಥಾನ ಸಿಗದಿರುವುದು ಬೇಸರ ತರಿಸಿದ್ದು ನಿಜ, ಮಂತ್ರಿ ಸ್ಥಾನ ಸಿಗದಿರುವುದು ಎಲ್ಲರಿಗೂ ನೋವು ತರಿಸಿದೆ, ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಸ್ಥಾನ ಸಿಗುವ ಭರವಸೆ ಇದೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details