ಕರ್ನಾಟಕ

karnataka

ETV Bharat / state

ವಿದ್ಯಾನಗರದ ಲಂಬಾಣಿ ಜನಾಂಗದರಿಂದ ವಿಶೇಷ ತೀಜ್​ ಹಬ್ಬ ಆಚರಣೆ - Teez Festival is a fostering of green culture

ಹರಿಹರದ ವಿದ್ಯಾನಗರದಲ್ಲಿನ ಲಂಬಾಣಿ ಜನಾಂಗದವರು, ತಮ್ಮ ಸಮುದಾಯದ ಧಾರ್ಮಿಕ ಹಬ್ಬವಾದ ಹಸಿರು ಸಂಸ್ಕೃತಿಯನ್ನು ಬೆಳೆಸುವ ತೀಜ್ (ಸಸಿ) ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ವಿದ್ಯಾನಗರದ ಲಂಬಾಣಿ ಜನಾಂಗದರಿಂದ ತೀಜ್​ ಹಬ್ಬ ಆಚರಣೆ..

By

Published : Oct 17, 2019, 9:17 AM IST

ದಾವಣಗೆರೆ: ಹರಿಹರದ ವಿದ್ಯಾನಗರದಲ್ಲಿನ ಲಂಬಾಣಿ ಜನಾಂಗ, ತಮ್ಮ ಸಮುದಾಯದ ಧಾರ್ಮಿಕ ಹಬ್ಬವಾದ ಹಸಿರು ಸಂಸ್ಕೃತಿಯನ್ನು ಬೆಳೆಸುವ ತೀಜ್ (ಸಸಿ) ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ವಿದ್ಯಾನಗರದ ಲಂಬಾಣಿ ಜನಾಂಗದರಿಂದ ತೀಜ್​ ಹಬ್ಬ ಆಚರಣೆ..

ವಿದ್ಯಾನಗರದಲ್ಲಿನ ಲಂಬಾಣಿ ಜನಾಂಗದವರು, ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಆಶೀರ್ವಾದದ 9 ಗೋದಿ ಕಾಳುಗಳ ಜೊತೆ ಮತ್ತೊಂದಿಷ್ಟು ಕಾಳುಗಳನ್ನು ಹುತ್ತದ ಮಣ್ಣಿನ ಜೊತೆ ಸೇರಿಸಿ ಮೊಳಕೆ ಬಿಡಲು ಹದಮಾಡಿ, 9 ದಿನ ಮಡಿಯಿಂದ ತುಂಬಿದ ಬಿಂದಿಗೆಯ ನೀರು ಹಾಕಿದ್ರು. ನಿನ್ನೆ ದೇವಸ್ಥಾನದ ಮುಂದೆ ಕಾಟಿ ಧ್ವಜವನ್ನು ಪ್ರತಿಷ್ಠಾಪಿಸಿ, ತಾಂಡಾದ ಪ್ರಮುಖರು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ರು. ಬಳಿಕ ತಾಂಡಾದ ಕನ್ಯೆಯರು ದೇವಸ್ಥಾನದಲ್ಲಿ ಹಾಕಿರುವ ತೀಜ್ ಬುಟ್ಟಿಗಳನ್ನು ಸುಂದರವಾಗಿ ಶೃಂಗರಿಸಿಕೊಂಡು, ಹೊಸ ಉಡುಗೆ ತೊಡುಗೆಗಳಿಂದ ಅಲಂಕೃತರಾಗಿ ಬುಟ್ಟಿಗಳನ್ನ ತಲೆಮೇಲೆ ಹೊತ್ತುಕೊಂಡು ತಾಂಡಾದ ಪ್ರಮುಖ ಬೀದಿಗಳಲ್ಲಿ ಸಂಗಡಿಗರೊಂದಿಗೆ ಸಾಗುತ್ತಾ ದೇವರ ಗುಡಿಯ ಅಂಗಳಕ್ಕೆ ಬಂದು ಲಂಬಾಣಿ ಹಾಡುಗಳಿಗೆ ಹೆಜ್ಜೆ ಹಾಕಿದ್ರು.

ರಾತ್ರಿಯಿಡೀ ಭಜನೆ, ಹಾಡು, ಕುಣಿತ ನಡೆಸಿ, ಹೆಣ್ಣು ಗಂಡು ಬೇಧವಿಲ್ಲದೇ ದೇವರ ಪ್ರಾರ್ಥನೆ ಮಾಡುತ್ತಾ ಜಾಗರಣೆ ಮಾಡಿ ಸಂಭ್ರಮಿಸಿದ್ರು.

ABOUT THE AUTHOR

...view details