ದಾವಣಗೆರೆ: ನಾಪತ್ತೆಯಾಗಿರುವ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ನ ಕಾರು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ರಸ್ತೆಯ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಮವಾರ ರಾತ್ರಿ 11.47 ಸುಮಾರು ಸುರಹೊನ್ನೆ ರಸ್ತೆಯಿಂದ ಹೊನ್ನಾಳಿ ಕಡೆಗೆ ತೆರಳಿರುವ ಕಾರಿನ ದೃಶ್ಯಗಳಿಗಳು ಈಟಿವಿಗೆ ದೊರೆತಿದೆ.
ಆದರೆ ಹೊನ್ನಾಳಿಗೆ ಕಾರು ಬಂದಿಲ್ಲ ಎಂದು ಚಂದ್ರಶೇಖರ್ ಕುಟುಂಬದವರು ವಾದವಾಗಿದೆ. ಕಾರು ಪಾಸಾಗಿರುವ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಪತ್ತೆಯಾಗಿರುವ ಚಂದ್ರಶೇಖರ್ ಯಾವ ಕಡೆಗೆ ತೆರಳಿದ್ದಾರೆ ಎಂಬ ಬಗ್ಗೆ ಗೊಂದಲ ಮೂಡಿದ್ದು, ರೇಣುಕಾಚಾರ್ಯ ಹಾಗೂ ಕುಟುಂಬದವರಲ್ಲಿ ಆತಂಕ ಮನೆಮಾಡಿದೆ. ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ ಪುತ್ರ ಚಂದ್ರಶೇಖರ ನಾಪತ್ತೆಯಾಗಿ ಇಂದಿಗೆ ಮೂರು ದಿನಗಳು ಕಳೆದರು ಕೂಡ ಪತ್ತೆಯಾಗದ ಬೆನ್ನಲ್ಲೇ ಪೋಲಿಸ್ ಇಲಾಖೆ ತನಿಖೆ ನಡೆಸುತ್ತಿದೆ.
ಚಂದ್ರಶೇಖರ್ ರೂಂ ಪರಿಶೀಲನೆ ಮಾಡುತ್ತಿರುವ ಎಸ್ಪಿ ಸಿಬಿ ರಿಷ್ಯಂತ್:ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ಗಂಟೆಗಳ ಕಾಲ ಚಂದ್ರಶೇಖರ್ ರೂಂನ್ನು ಎಸ್ಪಿ ಸಿಬಿ ರಿಷ್ಯಂತ್ ಪರಿಶೀಲನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ನಿವಾಸದಲ್ಲಿರುವ ಚಂದ್ರಶೇಖರ್ನ ಪ್ರತ್ಯೇಕ ರೂಂ ಅನ್ನು ರಿಷ್ಯಂತ್, ಹೊನ್ನಾಳಿ ಸಿಪಿಐ ಸಿದ್ದೇಗೌಡ ಸೇರಿ ರೂಂ ಪರಿಶೀಲನೆ ಮಾಡಿದ್ದು, ಚಂದ್ರು ಅವರ ಆಪ್ತರ ಹಾಗೂ ಪೋಷಕರ ಬಳಿ ಮಾಹಿತಿ ಪಡೆದಿದ್ದಾರೆ.