ಕರ್ನಾಟಕ

karnataka

ETV Bharat / state

ಸೂಳೆಕೆರೆ ಹಳ್ಳದಲ್ಲಿ ಕೊಚ್ಚಿಹೋದ ಜಾನುವಾರುಗಳು: ಕಂಗಾಲಾದ ಅನ್ನದಾತ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಬಳಿಯ ಸೂಳೆಕೆರೆ ಹಳ್ಳದಲ್ಲಿ ನೀರಿನ ರಭಸಕ್ಕೆ ಜಾನುವಾರುಗಳು ಕೊಚ್ಚಿ ಹೋಗಿವೆ. ಐದು ಜಾನುವಾರುಗಳು ಮೃತಪಟ್ಟಿದ್ದು, ರೈತ ಕಂಗಾಲಾಗಿದ್ದಾರೆ.

Cattle washed away in Sulekere ditch
ಸೂಳೆಕೆರೆ ಹಳ್ಳದಲ್ಲಿ ಕೊಚ್ಚಿಹೋದ ಜಾನುವಾರುಗಳು

By

Published : Oct 18, 2022, 1:02 PM IST

ದಾವಣಗೆರೆ:ಸೂಳೆಕೆರೆ ಹಳ್ಳದಲ್ಲಿ ನೀರಿನ ರಭಸಕ್ಕೆ ಜಾನುವಾರಗಳು ಕೊಚ್ಚಿಹೋಗಿ ಸಾವಿಗೀಡಾಗಿದ್ದು, ರೈತ ಕಣ್ಣೀರು ಹಾಕುತ್ತಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಬೆಳ್ಳೂಡಿ ಗ್ರಾಮದ ಸಿದ್ದಪ್ಪ ಎನ್ನುವ ರೈತ ಜಾನುವಾರುಗಳನ್ನು ಸೋಮವಾರ ಸಂಜೆ ಮೈ ತೊಳೆಯಲೆಂದು ಹಳ್ಳಕ್ಕೆ ಹೋಗಿದ್ದರು.

ಗಾಡಿಗೆ ಎರಡು ಎತ್ತು ಕಟ್ಟಿ, ಹಿಂಭಾಗಕ್ಕೆ ಒಂದು ಹಸು, ಒಂದು ಕರು, ಎರಡು ಹೋರಿಗಳನ್ನು ಕಟ್ಟಿ ಹಳ್ಳದ ಪಕ್ಕದಲ್ಲಿ ಗಾಡಿಯನ್ನು ಕ್ರಾಸ್ ಮಾಡುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಒಂದು ಎತ್ತನ್ನು ರಕ್ಷಣೆ ಮಾಡಿದ್ದು, ಉಳಿದ ಐದು ಜಾನುವಾರುಗಳು ನೀರಿಗೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿವೆ.

ಸೂಳೆಕೆರೆ ಹಳ್ಳದಲ್ಲಿ ಕೊಚ್ಚಿಹೋದ ಜಾನುವಾರುಗಳು

ಇನ್ನು ಘಟನಾ ಸ್ಥಳಕ್ಕೆ ಪಶು ವೈದ್ಯರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಐದು ಜಾನುವಾರುಗಳನ್ನು ಕಳೆದುಕೊಂಡ ರೈತ ದಿಕ್ಕುತೋಷಚದಂತಾಗಿದ್ದಾರೆ. ಇದರಿಂದ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಪರಿಹಾರಕ್ಕಾಗಿ ರೈತ ಸಿದ್ದಪ್ಪ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಹಾವೇರಿ: ಮನೆ ಗೋಡೆ ಕುಸಿದು ಬಿದ್ದು ವೃದ್ಧ ಸಾವು

ABOUT THE AUTHOR

...view details