ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಜಿಹಾದಿ ವದಂತಿ ಹರಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು - ವಿಪತ್ತು ನಿರ್ವಹಣಾ ಕಾಯ್ದೆ

"ಬಾಷಾ ನಗರ, ಆಜಾದ್ ನಗರ, ಭಗತ್ ಸಿಂಗ್ ನಗರ ಹಾಗೂ ವಿನೋಬನಗರ ಪ್ರದೇಶಗಳಲ್ಲಿ ಜಿಹಾದಿಗಳು ಹೆಚ್ಚಿದ್ದಾರೆ. ದಾವಣಗೆರೆ ಸ್ಮಶಾನವಾಗಲಿದೆ" ಎಂದು ಆತಂಕಗೊಳಿಸುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

police
police

By

Published : May 6, 2020, 12:42 PM IST

ದಾವಣಗೆರೆ: ಕೋವಿಡ್ -19 ಹೆಸರಿನಲ್ಲಿ ಧರ್ಮವೊಂದರ ವಿರುದ್ಧ ಸುಳ್ಳು ಮಾಹಿತಿ ನೀಡಿ ಪ್ರಚೋದನೆ ನೀಡಿದ ಆರೋಪದ ಮೇಲೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ರೀತಿ ಸುಳ್ಳು ಮಾಹಿತಿ ನೀಡಿದಾತನನ್ನು ಶಿವಪ್ರಸಾದ್ ಕುರುಡಿಮಠ್ ಎಂದು ಗುರುತಿಸಲಾಗಿದೆ. "ಬಾಷಾ ನಗರ, ಆಜಾದ್ ನಗರ, ಭಗತ್ ಸಿಂಗ್ ನಗರ ಹಾಗೂ ವಿನೋಬನಗರ ಪ್ರದೇಶಗಳಲ್ಲಿ ಜಿಹಾದಿಗಳು ಹೆಚ್ಚಿದ್ದಾರೆ. ದಾವಣಗೆರೆ ಸ್ಮಶಾನವಾಗಲಿದೆ" ಎಂದು ಆತಂಕಗೊಳಿಸುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ.

ಸುಳ್ಳು ಮಾಹಿತಿ ಹರಡಿದಾತನ ವಿರುದ್ಧ ಕೇಸ್

ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 54ರ ಅನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಕೋರ್ಗೆಟ್​ಗೆ ಹಾಜರುಪಡಿಸಲಾಗಿದ್ದು, ಇನ್ನು ಮುಂದೆ ಇಂಥ ಅಪರಾಧ ಮಾಡುವುದಿಲ್ಲ ಎಂದು ಶಿವಪ್ರಸಾದ್​ನಿಂದ 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಸುಳ್ಳು ಮಾಹಿತಿ ಹರಡಿದಾತನ ವಿರುದ್ಧ ಕೇಸ್

ಯಾರೂ ವಿನಾ ಕಾರಣ ಸುಳ್ಳು ಸುದ್ದಿ ಹರಡಬಾರದು. ಕೊರೊನಾ ಹೆಸರಿನಲ್ಲಿ ಈ ರೀತಿ ತಪ್ಪು ಮಾಹಿತಿ, ಕೊರೊನಾ ಪೀಡಿತರ ಬಗ್ಗೆ ಅವಹೇಳನ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details