ಕರ್ನಾಟಕ

karnataka

ETV Bharat / state

ಹೊತ್ತಿ ಉರಿದ ಕಾರು: ನಾಲ್ವರು ಪ್ರಾಣಾಪಾಯದಿಂದ ಪಾರು - ಅಗ್ನಿಶಾಮಕ ದಳ

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನೊಳಗಿದ್ದ ನಾಲ್ವರು ಹೊರ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಇಂಡಿಕಾ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

car burnt
car burnt

By

Published : Sep 3, 2020, 12:00 PM IST

Updated : Sep 3, 2020, 12:31 PM IST

ದಾವಣಗೆರೆ:ಎಂಜಿನ್​ಗೆ ಬೆಂಕಿ ಕಿಡಿ ತಾಗಿದ ಪರಿಣಾಮ ಕಾರು ಹೊತ್ತಿ ಉರಿದಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಹಾರಕನಾಳ್ ಸಣ್ಣ ತಾಂಡಾ ಬಳಿ ನಡೆದಿದೆ.

ಹೊತ್ತಿ ಉರಿದ ಕಾರು

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನೊಳಗಿದ್ದ ನಾಲ್ವರು ಹೊರ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹರಪನಹಳ್ಳಿಯಿಂದ ವಿಂಡ್ ಫ್ಯಾನ್ ಘಟಕದಲ್ಲಿ ಕೆಲಸಕ್ಕಾಗಿ ಕಾರ್ಮಿಕರು ತೆರಳುತ್ತಿದ್ದರು.

ಹೊತ್ತಿ ಉರಿದ ಕಾರು

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಇಂಡಿಕಾ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Sep 3, 2020, 12:31 PM IST

ABOUT THE AUTHOR

...view details