ದಾವಣಗೆರೆ:ಉಳಿದ ಬೂಸ್ಟರ್ ಡೋಸ್ಗಳನ್ನು ನಾನು ಹಾಕ್ಲಾ, ಹೇಳು ನಾನು ಬೂಸ್ಟರ್ ಡೋಸ್ ಗಳನ್ನು ಮಾಡ್ಲಾ ಎಂದು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಭೈರತಿ ಬಸವರಾಜ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಕಂಡು ಬಂತು.
ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಭೈರತಿ ಬಸವರಾಜ್ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಹಾಕಲು ನೀಡಿದ್ದ ಗಡವನ್ನು ತಲುಪದ ತಾಲೂಕು ಆರೋಗ್ಯಧಿಕಾರಿಗಳಿಗೆ ಸಚಿವರು ಗದರಿಸಿದರು. ಜವಾಬ್ದಾರಿ ಇಲ್ವಾ ನಿಮಗೆಲ್ಲ, ಏನ್ರೀ ನಿಮಗೆ ಎಷ್ಟು ಡೋಸ್ಗಳಿವೆ ಎಂದು ಗೊತ್ತಿಲ್ವ. ನೀವು ಫೀಲ್ಡಿಗೆ ಹೋಗ್ತಿರಾ ಅಥವಾ ಇಲ್ವಾ, ಯಾವುದೋ ಲೆಕ್ಕಕ್ಕೆ ಯಾವುದೋ ಲೆಕ್ಕ ಹೇಳ್ತಿದಿದ್ದರಲ್ಲ ಎಂದು ಹೊನ್ನಾಳಿ ತಾಲೂಕಿನ ಆರೋಗ್ಯಧಿಕಾರಿಗೆ ಚಳಿ ಬಿಡಿಸಿದರು.
ಓದಿ:ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆ ಅರ್ಧಕ್ಕೆ ಮೊಟಕು
ಮಾಹಿತಿ ಇಲ್ಲದೇ ಸಭೆ ಆಗಮಿಸ್ತಿರಾ ರೀ.. ಡಿಸಿಯವರೇ ಇವರೆಲ್ಲರಿಗೂ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ತಿಳಿಸಿದರು. ಹರಿಹರ ತಾಲೂಕು ಆರೋಗ್ಯಧಿಕಾರಿಗೆ ತರಾಟೆಗೆದುಕೊಂಡ ಸಚಿವರು ಶೇ.24 ರಷ್ಟು ಬೂಸ್ಟರ್ ಡೋಸ್ ಆಗಿದೆ. ಅಷ್ಟೇ ಇನ್ನು ಉಳಿದಿದ್ದು ಅಂತೀರಾ.. ಉಳಿದ ಲಸಿಕೆಗಳನ್ನು ನಾನು ಬಂದು ಹಾಕ್ಲಾ, ನಿಮಗೆ ಜವಾಬ್ದಾರಿ ಇಲ್ವಾ. ಕೇವಲ ಶೇ. 24ರಷ್ಟು ಆಗಿದೆ ಎನ್ನುತ್ತಿರಲ್ಲ. ಶೇ. 50ರಷ್ಟು ಬೂಸ್ಟರ್ ಡೋಸ್ನ್ನು ಇದೇ 20 ರೊಳಗೆ ಪೂರ್ಣಗೊಳಿಸಬೇಕು ಎಂದು ಗಡವು ನೀಡಿದರು.