ಕರ್ನಾಟಕ

karnataka

ETV Bharat / state

ದಾವಣಗೆರೆ: ಬಸ್‌ ಪಲ್ಟಿಯಾಗಿ 20 ಜನರಿಗೆ ಗಾಯ, ಕಿಟಕಿ ಒಡೆದು ಹೊರಬಂದ ಪ್ರಯಾಣಿಕರು - ಗಾಜು ಒಡೆದು ಕಿಟಕಿಯಿಂದ ಹೊರ ಬಂದ ಪ್ರಯಾಣಿಕರು

ಬಸ್ ಪಲ್ಟಿಯಾಗಿ ಪ್ರಯಾಣಿಕರು ಪ್ರಾಣ ರಕ್ಷಣೆಗೆ ಕಿಟಕಿ ಗಾಜು ಒಡೆದು ಹೊರಬಂದಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

Bus  accident in Davangere
ಪಲ್ಟಿಯಾದ ಬಸ್

By

Published : Mar 13, 2023, 11:02 AM IST

Updated : Mar 13, 2023, 2:02 PM IST

ದಾವಣಗೆರೆ: ಬಸ್‌ ಪಲ್ಟಿಯಾಗಿ 20 ಜನರಿಗೆ ಗಾಯ..

ದಾವಣಗೆರೆ:ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿಯಾಗಿ ಭಾರಿ ದುರಂತವೊಂದು ತಪ್ಪಿರುವ ಘಟನೆ ನಗರದ ಬೇತೂರ ರಸ್ತೆ ಬಳಿ ಇಂದು ನಡೆಯಿತು. ಬಸ್ ಸೇತುವೆ ಮೇಲೆ ಹತ್ತಿದ್ದು ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಬಸ್ ಸೇತುವೆ ಮೇಲಿಂದ ಕೆಳಗೆ ಉರುಳದೇ ಹಾಗೆಯೇ ನಿಂತಿರುವುದು ಅಚ್ಚರಿಗೆ ಕಾರಣವಾಗಿದೆ.

ಪಲ್ಟಿಯಾಗಿದ್ದ ಬಸ್​​ನಲ್ಲಿದ್ದ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಗಾಜು ಒಡೆದು ಕಿಟಕಿಯಿಂದ ಹೊರ ಬಂದಿದ್ದಾರೆ. ಈ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್​​ ಆಗಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಗಾಯಳುಗಳು ರಸ್ತೆಯಲ್ಲೇ ಕುಳಿತು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಕಂಡು ಬಂದಿದೆ. ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟರು. ಬಸ್ ದಾವಣಗೆರೆ ಜಿಲ್ಲೆಯ ಜಗಳೂರಿನ ಮೂಲಕ ಪ್ರಯಾಣಿಕರನ್ನು ಹೊತ್ತು ದಾವಣಗೆರೆ ನಗರಕ್ಕೆ ಆಗಮಿಸುತ್ತಿತ್ತು. ಈ ವೇಳೆ ದುರಂತ ಘಟಿಸಿದೆ.

ಸಣ್ಣ ಹಳ್ಳಕ್ಕೆ ಕಟ್ಟಲಾದ ಸೇತುವೆಗೆ ಡಿಕ್ಕಿ: ದಾವಣಗೆರೆ ನಗರದ ಬೇತೂರು ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು ಬಸ್​ ಉರುಳಿದೆ. ಮಹಿಳೆಯರು ಹಾಗೂ ಮಕ್ಕಳರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್​ ಅಪಘಾತದಲ್ಲಿ ಪ್ರಾಣಹಾನಿಯಾಗಿಲ್ಲ. ಅವಘಡಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ. ದಾವಣಗೆರೆ ಅಜಾದ್ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

14 ಜನರ ದುರ್ಮರಣ:ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ 14 ಮಂದಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಸಮೃದ್ಧಿ ಹೆದ್ದಾರಿಯಲ್ಲಿ ಕಾರೊಂದು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿದ್ದರು. ಔರಂಗಾಬಾದ್‌ನಿಂದ ಹೊರಟಿದ್ದ ಕಾರು ಹಲವಾರು ಬಾರಿ ಪಲ್ಟಿ ಹೊಡೆದು ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿತ್ತು. ಬರ್ವೆ ಮತ್ತು ಬೋರುಡೆ ಗ್ರಾಮದ ಕುಟುಂಬಸ್ಥರು ಔರಂಗಾಬಾದ್‌ನಿಂದ ಶೇಗಾಂವ್‌ಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಯುಪಿಯಲ್ಲಿ ಐವರ ದುರ್ಮರಣ: ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದರು. ಮೃತರನ್ನು ಬಿಹಾರದ ಸಸಾರಾಮ್ ನಿವಾಸಿಗಳಾದ ಸಾಹಿಲ್ ಖಾನ್ (19), ಚಾಲಕ ಶಾರುಖ್ ಚಾಲಕ (25), ಸೈನಾ ಖಾತೂನ್ (37), ರುಖ್ಸಾರ್ (31) ಹಾಗೂ ಜಮಾಲ್ ಎಂದು ಗುರುತಿಸಲಾಗಿತ್ತು. ಅಪಘಾತದ ಬಗ್ಗೆ ಮಾಹಿತಿ ಪಡೆದ ಅಖಂಡ ನಗರ ಪೊಲೀಸ್ ಠಾಣೆಯ ಸಂತೋಷ್ ಕುಮಾರ್ ಸಿಂಗ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದರು.

ಆಂಧ್ರದಲ್ಲಿ ಮೂವರು ಸಾವು:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲೂ ಟ್ಯಾಂಕರ್​ ಮತ್ತು ಕಾರು ನಡುವೆ ಅಪಘಾತ ಸಂಭವಿಸಿತ್ತು. ಇದರಲ್ಲಿ ತಿರುಪತಿಗೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ:ಮೂರು ಪ್ರತ್ಯೇಕ ರಸ್ತೆ ಅಪಘಾತ.. 14 ಜನರ ದುರ್ಮರಣ

Last Updated : Mar 13, 2023, 2:02 PM IST

ABOUT THE AUTHOR

...view details