ಕರ್ನಾಟಕ

karnataka

ETV Bharat / state

ಹೊನ್ನಾಳಿ: ಸಂಭ್ರಮದಿಂದ ನಡೆದ ಹೋರಿ ಬೆದರಿಸುವ ಸ್ಪರ್ಧೆ... - bull race compitation davangere

ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಪ್ರತಿ ವರ್ಷ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

davanagere
ಹೋರಿ ಬೆದರಿಸುವ ಸ್ಪರ್ಧೆ

By

Published : Nov 17, 2020, 4:18 PM IST

ದಾವಣಗೆರೆ: ದೀಪಾವಳಿ ಹಬ್ಬ ಬಂತೆಂದರೆ ಒಂದೊಂದು ರೀತಿಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಿ ಖುಷಿ ಪಟ್ಟರು.

ಕತ್ತಿಗೆ ಗ್ರಾಮದಲ್ಲಿ ವಿವಿಧ ತಳಿಯ ಹೋರಿಗಳನ್ನು ಸುಮಾರು ಮೂರು ನಾಲ್ಕು ತಿಂಗಳ ಹಿಂದೆಯೇ ತಯಾರು ಮಾಡಲಾಗಿರುತ್ತದೆ. ವಿಶೇಷ ಆಹಾರ ತಯಾರಿಸಿ ಬೆಳೆಸಿರಲಾಗುತ್ತದೆ. ಈ ಹಬ್ಬದ ವೇಳೆ ಓಡಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೋರಿಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ಹೋರಿ ಕೊರಳಿಗೆ ಸುಮಾರು ಐದರಿಂದ ಏಳು ಕೆಜಿ ಒಣಕೊಬ್ಬರಿಯ ಸರಪಳಿ ಮಾಡಿ ಕಟ್ಟಲಾಗುತ್ತದೆ. ಗ್ರಾಮದ ಆಂಜನೇಯ ಸ್ವಾಮಿ ಪೂಜೆ ನೆರವೇರಿಸಿದ ಬಳಿಕ ಹೋರಿಗಳನ್ನು ಬೆದರಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಮದ ಯುವಕರು ಓಡಿ ಬರುವ ಹೋರಿಗಳ ಕೊರಳಿನ ಮೇಲೆ ಕೈ ಹಾಕಿ ಒಣಕೊಬ್ಬರಿ ಹರಿಯುವುದುಂಟು. ಇನ್ನು ಹೋರಿಗಳನ್ನು ಹಿಡಿಯಲು ಯುವಕರು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಾರೆ.

ಈ ವೇಳೆ ಅನಾಹುತ ಆಗುವ ಸಂಭವ ಇರುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸದಿದ್ದರೂ ಸಂಭ್ರಮಕ್ಕೆ ಕಡಿಮೆ ಏನಿರಲಿಲ್ಲ. ಇನ್ನು ಇಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಆಗಮಿಸುವುದು ವಿಶೇಷ.

ABOUT THE AUTHOR

...view details