ದಾವಣಗೆರೆ :ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕೋ, ಇಲ್ವೋ ಎಂದು ನಿರ್ಧಾರ ಮಾಡ್ಬೇಕಾಗಿದೆ ಎಂದು ಮಾಜಿ ಸಿಎಂ ಬಿಎಸ್ವೈ ಅವರು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಆಯೋಜಿಸಿದ್ದ ಪರಿಷತ್ ಚುನಾವಣಾ ಪ್ರಚಾರದ ಸಭೆ ಮುನ್ನ ಅವರು ಮಾತನಾಡಿದರು. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲು ನಿರ್ಧಾರ ಮಾಡ್ತೇವೆ.
ಜೆಡಿಎಸ್ ಮೈತ್ರಿ ಕುರಿತಂತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿರುವುದು.. ಜೆಡಿಎಸ್ನವರು ಎಲ್ಲೆಲ್ಲಿ ಅರ್ಭರ್ಥಿಗಳನ್ನು ಹಾಕುತ್ತಾರೋ ನೋಡಿಕೊಂಡು ನಂತರ ನಿರ್ಧಾರ ಮಾಡ್ತೇವೆ. ಅಭ್ಯರ್ಥಿಗಳನ್ನು ಹಾಕಿದ ನಂತರ ಚರ್ಚೆ ನಡೆಸುತ್ತೇವೆ. ಪರಸ್ಪರ ಸಹಕಾರ ಕೊಡಿ ಎಂದು ಅವರಲ್ಲಿ ಕೇಳುತ್ತೇವೆ ಎಂದು ಬಿಎಸ್ವೈ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಿಂದ ಎರಡನೇ ಸುತ್ತಿನ ಪ್ರಚಾರ ಶುರುವಾಗಿದೆ. ರಾಜ್ಯದಲ್ಲಿ ಕೇವಲ 20 ಸೀಟ್ಗಳಿಗೆ ನಿಶ್ಚಿತವಾಗಿ ಸ್ಪರ್ಧೆ ಮಾಡುತ್ತೇವೆ. ಇದರಲ್ಲಿ 15 ಸೀಟ್ ಗೆದ್ದೇ ಗೆಲ್ಲುತ್ತೇವೆ. ವಿಧಾನ ಪರಿಷತ್ನಲ್ಲಿ ಸ್ಪಷ್ಟ ಬಹುಮತ ಸಿಗಲಿ ಎಂಬ ಅಪೇಕ್ಷೆ ಇದೆ.
ಬಿಜೆಪಿ ಪರ ವಾತಾವರಣ ಎಲ್ಲಾ ಕಡೆ ಇದೆ. ಆದ್ದರಿಂದ, ಎಲ್ಲಾ ಕಡೆ ಪ್ರವಾಸ ಶುರು ಮಾಡಿದ್ದೇವೆ. ಶಾಸಕರು ಕೂಡ ನಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ, ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಎಸ್ವೈ :ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು. ಶಿವಮೊಗ್ಗ ವಿಧಾನ ಪರಿಷತ್ ಮತ ಕ್ಷೇತ್ರದ ಚನ್ನಗಿರಿಯಿಂದ ಪ್ರಚಾರ ಸಭೆ ನಡೆಸಿ, ಶಿವಮೊಗ್ಗ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅರುಣ್ ಪರ ಮತಯಾಚಿಸಿದ್ರು.
ಚನ್ನಗಿರಿ ಹಾಗೂ ಸಂತೆಬೆನ್ನೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಸಚಿವ ಕೆಎಸ್ ಈಶ್ವರಪ್ಪ, ಸಂಸದ ಜಿ. ಎಂ ಸಿದ್ದೇಶ್ವರ್, ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆಯಾಡಿದರು. ಇನ್ನು ಸಂತೆಬೆನ್ನೂರು ಪ್ರಚಾರ ಸಭೆಯಲ್ಲಿ 15 ಗ್ರಾಪಂಗಳ ಸದಸ್ಯರು ಅಧ್ಯಕ್ಷರು ಭಾಗಿಯಾದ್ದರು.
ಓದಿ:ಕೆ.ಆರ್.ಪುರ ಮಳೆಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ.. ಸಂತ್ರಸ್ತರಿಗೆ ಪರಿಹಾರದ ಭರವಸೆ