ದಾವಣಗೆರೆ:ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಪಾಲು ನೀಡುವಂತೆ ತಂದೆಯ ಮನೆ ಮುಂದೆ ಮಕ್ಕಳು ಧರಣಿ ಕುಳಿತ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ದಿ.ಸಿದ್ದಲಿಂಗಪ್ಪ ಎಂಬುವರ ಮಕ್ಕಳು ಆಸ್ತಿಗಾಗಿ ಬೀದಿಗಿಳಿದಿದ್ದಾರೆ.
ದಿ.ಸಿದ್ದಲಿಂಗಪ್ಪ ಅವರಿಗೆ ಒಟ್ಟು 12 ಮಂದಿ ಮಕ್ಕಳಿದ್ದು, ಅದರಲ್ಲಿ 8 ಮಂದಿ ಗಂಡು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯರಾದ ಹಾಲಸಿದ್ದಪ್ಪ, ಹಾಲೇಶಪ್ಪ, ರಹನುಮಂತಪ್ಪ, ಹನುಮಂತಪ್ಪ ಎಂಬುವರು ತಮಗೆ ಆಸ್ತಿ ಪಾಲು ಮಾಡಿ ಕೊಡುತ್ತಿಲ್ಲ ಎಂದು ನಾಲ್ವರು ಸಹೋದರರು ಆರೋಪಿಸಿದ್ದಾರೆ. ತಂದೆ ವಾಸವಿದ್ದ ಮನೆಯಲ್ಲಿ ಹಿರಿಯ ಮಕ್ಕಳಾದ ಹಾಲಸಿದ್ದಪ್ಪ, ಹಾಲೇಶಪ್ಪ ವಾಸವಿದ್ದು, ಈ ಮನೆ ಮುಂದೆಯೇ ಧರಣಿ ಕುಳಿತಿದ್ದಾರೆ.