ಕರ್ನಾಟಕ

karnataka

ETV Bharat / state

ದುನಿಯಾ ವಿಜಿ ಬಂದು ಅಕ್ಷತೆ ಹಾಕಿದ್ರೆ ಮಾತ್ರ ಮದುವೆಯಾಗ್ತೇನೆ: ದಾವಣಗೆರೆ ಯುವತಿ ಹಠ - ನಟ ದುನಿಯಾ ವಿಜಯ್

ಕಳೆದ ಐದು ವರ್ಷದ ಹಿಂದೆ ಅನುಷ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ಅಲ್ಲದೆ ದುನಿಯಾ ವಿಜಯ್ ಬರೋವರೆಗೂ ಮನೆ ಓಪನಿಂಗ್ ಮಾಡೋದಿಲ್ಲ ಎಂದು ಹಾಗೆಯೇ ಬಿಟ್ಟಿದ್ದರು. ಈಗ ಅನುಷ ಸಹ ದುನಿಯಾ ವಿಜಯ್​ ಮದುವೆಗೆ ಬರೋವರೆಗೂ ಹಸೆಮಣೆ ಏರಲ್ಲವೆಂದು ಹಠ ಹಿಡಿದಿದ್ದಾಳೆ.

ದಾವಣಗೆರೆ ಹುಡುಗಿಯ ಹುಚ್ಚು ಹಠ
ದಾವಣಗೆರೆ ಹುಡುಗಿಯ ಹುಚ್ಚು ಹಠ

By

Published : Nov 23, 2021, 3:28 PM IST

Updated : Nov 24, 2021, 5:43 PM IST

ದಾವಣಗೆರೆ :ಸಂಬಂಧಿಕರು, ಅಣ್ಣಂದಿರು ಬಾರದಿದ್ರೆ ಮದುವೆ ಆಗುವುದಿಲ್ಲ, ಅವರು ಬಂದು ಅಕ್ಷತೆ ಹಾಕಿದರೆ ಮಾತ್ರ ಹಸೆಮಣೆ ಏರುತ್ತೇನೆ ಎಂದು ಹೇಳೋದು ಸಾಮಾನ್ಯ. ಆದ್ರೆ ನಗರದ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾರೆ.

ದುನಿಯಾ ವಿಜಿ ಬಂದು ಅಕ್ಷತೆ ಹಾಕಿದ್ರೆ ಮಾತ್ರ ಮದುವೆಯಾಗ್ತೇನೆ - ಮದುಮಗಳ ಹಠ

ನಗರದ ರಾಮನಗರದ ಅನುಷ ಹಠ ಹಿಡಿದ ಯುವತಿಯಾಗಿದ್ದು, ಅನುಷ ಕುಟುಂಬಸ್ಥರೆಲ್ಲರೂ ದುನಿಯಾ ವಿಜಯ್ ಅಭಿಮಾನಿಗಳಾಗಿದ್ದಾರೆ. ಕಳೆದ ಐದು ವರ್ಷದ ಹಿಂದೆ ಅನುಷ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು.

ವಿವಾಹ ಆಮಂತ್ರಣ ಪತ್ರಿಕೆ

ಅಲ್ಲದೆ ದುನಿಯಾ ವಿಜಯ್ ಬರೋವರೆಗೂ ಮನೆ ಓಪನಿಂಗ್ ಮಾಡೋದಿಲ್ಲ ಎಂದು ಹಾಗೆಯೇ ಬಿಟ್ಟಿದ್ದರು. ಅಂದು ವಿಜಯ್ ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು.

ವಿವಾಹ ಆಮಂತ್ರಣ ಪತ್ರಿಕೆ

ಈಗ ಶಿವಾನಂದ ಮಗಳು ಅನುಷ ಅವರ ಮದುವೆ ಇದೇ ತಿಂಗಳ 29 ಕ್ಕೆ ಇದ್ದು, ದುನಿಯಾ ವಿಜಿ ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ, ತಾಳಿಯನ್ನೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಅಲ್ಲದೆ ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿರುವ ಅನುಷ, ಲಗ್ನ ಪತ್ರಿಕೆಯಲ್ಲೂ ಕೂಡ ದುನಿಯಾ ವಿಜಯ್ ಅವರ ಫೋಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ.

Last Updated : Nov 24, 2021, 5:43 PM IST

For All Latest Updates

ABOUT THE AUTHOR

...view details