ದಾವಣಗೆರೆ: ಇಂದು ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆದಿದ್ದು, ಮೂರನೇ ಬಾರಿಗೆ ಪಾಲಿಕೆ ಅಧಿಕಾರದ ಚುಕ್ಕಾಣಿ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ 30 ನೇ ವಾರ್ಡ್ನ ಬಿಜೆಪಿ ಕಾರ್ಪೋರೇಟರ್ ಜಯಮ್ಮ ಗೋಪಿನಾಯ್ಕ್ ಆಯ್ಕೆ ಆಗಿದ್ದು, ಎಸ್ ಸಿ ಮಹಿಳೆಗೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇನ್ನು ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಬಂದಿದ್ದು, 8 ನೇ ವಾರ್ಡ್ನ ಬಿಜೆಪಿ ಕಾರ್ಪೋರೇಟರ್ ಗಾಯತ್ರಿಬಾಯಿಯವರು ಆಯ್ಕೆಯಾಗಿದ್ದಾರೆ. ಮೂರನೇ ಬಾರಿಯೂ ಕೂಡ ಬಿಜೆಪಿ ಪಕ್ಷ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ತನ್ನ ತೆಕ್ಕೆ ಹಾಕಿಕೊಂಡಿತು. ಇನ್ನು ಮೇಯರ್ ಗಾದಿ ಬಿಜೆಪಿ ಪಾಲಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಇಬ್ಬರು ಎದ್ದು ಹೋಗಿದ್ರು.