ದಾವಣಗೆರೆ: ರಾಜ್ಯದಲ್ಲಿ ಫಲಿತಾಂಶ ಅತಂತ್ರ ಅದರೆ ಇದುವರೆಗೂ ಜೆಡಿಎಸ್ನೊಂದಿಗೆ ಒಳ ಒಪ್ಪಂದ ಆಗಿಲ್ಲ, ಅಂತಹ ಸಂದರ್ಭ ಬಂದರೆ ಒಪ್ಪಂದ ಆಗಬಹುದು ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿರುವ ಅವರ ನಿವಾಸದಲ್ಲಿ ಎಕ್ಸಿಟ್ ಪೋಲ್ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ನಾಡಿಮಿಡಿತ ಕಾರ್ಯಕರ್ತರ ಮುಖಂಡರ ನಾಡಿ ಮಿಡಿತ ನಮಗೆ ಗೊತ್ತಿದೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಹೊರತುಪಡಿಸಿಯೂ ಜನರು ಬಿಜೆಪಿಗೆ ಮತ ಹಾಕುತ್ತಾರೆ. ಮಾಧ್ಯಮಗಳ ವಿರುದ್ಧ ದೋಷಣೆ ಮಾಡುತ್ತಿಲ್ಲ. ಏನೇ ವರದಿ ಮಾಡಿದರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹಾಗಂತ ಮಾಧ್ಯಮಗಳು ಬಿತ್ತರಿಸಿದ ವರದಿ ಸುಳ್ಳು ಎಂದು ಹೇಳುವುದಿಲ್ಲ, ನಮ್ಮ ಟಾರ್ಗೆಟ್ 150 ಎಂದು ಇತ್ತು, ಈಗ 125 ಕ್ಕೂ ಹೆಚ್ವು ಬರುವ ಸಾಧ್ಯತೆ. ಹಳ್ಳಿಗಳಲ್ಲಿ ನಮ್ಮ ಕಾರ್ಯಕರ್ತರ ನಾಡಿ ಮಿಡಿತ ನಮಗೆ ಗೊತ್ತಿರುತ್ತೆ. ಬಹುಮತ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜೊತೆ ಬಿಜೆಪಿ ಒಳ ಒಪ್ಪಂದ...?ಜೆಡಿಎಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ನಮ್ಮ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಇದುವರೆಗೂ ಒಳ ಒಪ್ಪಂದ ಆಗಿಲ್ಲ. ಅಂತಹ ಸಂದರ್ಭ ಒದಗಿ ಬಂದರೂ ಆಗಬಹುದು. ಫಲಿತಾಂಶ ಬಂದ ನಂತರ ನಿರ್ಧಾರ ಆಗುತ್ತದೆ. ಪರೋಕ್ಷವಾಗಿ ಜೆಡಿಎಸ್ ಜತೆ ಕೈ ಜೋಡಿಸುವ ಇಂಗಿತವನ್ನು ಹೊನ್ನಾಳಿ ಶಾಸಕರು ವ್ಯಕ್ತಪಡಿಸಿದರು.