ಕರ್ನಾಟಕ

karnataka

ETV Bharat / state

ಈಸ್ಟ್ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ಅಡಳಿತ.. ರಣದೀಪ್ ಸಿಂಗ್ ಸುರ್ಜೇವಾಲಾ - ಅಪಪ್ರಚಾರಗಳು ಬಿದ್ದು ಹೋಗಿವೆ

ಬಿಜೆಪಿಯ ನಾಯಕರು ಹಿಂದೂ, ಮುಸ್ಲಿಂ, ದಲಿತ, ಬ್ರಾಹ್ಮಣ ಹೀಗೆ ಎಲ್ಲಾ ವರ್ಗದ ಜನರ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ವಿರುದ್ಧ ಮಾಡಿದ ಎಲ್ಲಾ ಅಪಪ್ರಚಾರಗಳು ಬಿದ್ದು ಹೋಗಿವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲಾ

By

Published : Oct 9, 2022, 7:40 PM IST

Updated : Oct 9, 2022, 9:14 PM IST

ದಾವಣಗೆರೆ: ಈಸ್ಟ್ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ಅಡಳಿತ ಮಾಡುತ್ತಿದೆ. ಬಿಜೆಪಿ ಎಲ್ಲಾ ವರ್ಗದ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಹಿಂದೂ, ಮುಸ್ಲಿಂ, ದಲಿತ, ಬ್ರಾಹ್ಮಣ ಹೀಗೆ ಎಲ್ಲಾ ವರ್ಗದ ಜನರ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ವಿರುದ್ಧ ಮಾಡಿದ ಎಲ್ಲಾ ಅಪಪ್ರಚಾರಗಳು ಬಿದ್ದು ಹೋಗಿವೆ. 75 ವರ್ಷದ ಇತಿಹಾಸದಲ್ಲಿ 3570 ಕಿಲೋ ಮೀಟರ್ ಪಾದಯಾತ್ರೆ ಮಾಡಿರಲಿಲ್ಲ. ರಾಹುಲ್ ಗಾಂಧಿ ಮಾತ್ರ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಮೂರು ಭಾಗದಲ್ಲಿ ಮೂರು ಕೋಟಿ ಜನ ವಿವಿಧ ರೀತಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಗಲಭೆಗಳ ವಿರುದ್ಧ ಈ ಯಾತ್ರೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಣದೀಪ್ ಸಿಂಗ್ ಸುರ್ಜೇವಾಲಾ

ಮೋದಿ ಮತ್ತೆ ಬಿಜೆಪಿ ಪ್ರೇಂಡ್ಸ್ ದಿನಕ್ಕೆ ಒಂದು ಸಾವಿರ ಕೋಟಿ ದುಡಿಮೆ:ಮೋದಿ ಮತ್ತೆ ಬಿಜೆಪಿ ಫ್ರೆಂಡ್ಸ್ ದಿನಕ್ಕೆ ಒಂದು ಸಾವಿರ ಕೋಟಿ ದುಡಿಮೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ 54ರಷ್ಟು ಆಸ್ತಿಯನ್ನು ಕೇವಲ ಒಂಬತ್ತು ಜನರ ಕೈಗೆ ಬಿಜೆಪಿ ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಅಂದ್ರೆ ಏನು, ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ಏನು ಅಂತ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಮನವರಿಕೆ ಆಗಿದೆ‌‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಪಿಎಸ್ಐ ಕೇಸ್​ನಲ್ಲಿ ಎಡಿಜಿಪಿ ಜೈಲಿ​ಗೆ:ಕೆಪಿಎಸ್​ಸಿ ಭ್ರಷ್ಟಾಚಾರದಲ್ಲಿದೆ.ಕರ್ನಾಟಕದ ಪಿಎಸ್ಐ ಕೇಸ್​ನಲ್ಲಿ ಎಡಿಜಿಪಿ ಜೈಲಿನಲ್ಲಿ ಇದ್ದಾರೆ. ಇಲ್ಲಿ ಹಣಕ್ಕಾಗಿ ಎಲ್ಲವೂ ಮಾರಾಟವಾಗುತ್ತಿವೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ದ್ವಿಗುಣವಾಗಿದೆ. ಬಿಜೆಪಿಯವರು ಭ್ರಷ್ಟಾಚಾರವನ್ನು ಲೀಗಲ್ ಮಾಡಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಕರ್ನಾಟಕ ಸಿಎಂ ಅತಿ ಹೆಚ್ವು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಿಂದ ಕರ್ನಾಟಕದಲ್ಲಿರುವ ಕಂಪನಿಗಳು ಹೈದರಾಬಾದ್​ಗೆ ಶಿಪ್ಟ್ ಆಗುತ್ತಿವೆ. ಇದರಿಂದ ಹಣ ಹರಿವು ಕಡಿಮೆಯಾಗಲಿದೆ. ಇವುಗಳ ಬಗ್ಗೆ ಇಂದಿನ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡುವವರು ಯಾರು? ಈ ಎಲ್ಲವುಗಳ ವಿರುದ್ದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ ಎಂದರು.

ಇಡಿಯಿಂದ ಉದ್ದೇಶಪೂರ್ವಕ ವಿಚಾರಣೆ:ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಿದೆ‌. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ಡಿ ಕೆ ಸುರೇಶ್ ಅವರನ್ನು ಇಡಿ ವಿಚಾರಣೆಗೆ ಉದ್ದೇಶ ಪೂರ್ವಕವಾಗಿ ದೆಹಲಿಗೆ ಕರೆಯಲಾಗಿದೆ. ಭಾರತ್ ಜೋಡೋ ಯಾತ್ರೆಗೆ ತೊಂದರೆ ಕೊಡಲು ಬಿಜೆಪಿ ಮಾಡುತ್ತಿರುವ ಹುನ್ನಾರ ಎಂದು ಆರೋಪಿಸಿದ ಸುರ್ಜೇವಾಲಾ, ಇದು ಜನರ ಯಾತ್ರೆ ಯಾವುದೇ ಲೀಡರ್​ಗಳ ಯಾತ್ರೆಯಲ್ಲ, ರಾಹುಲ್ ಗಾಂಧಿ ಮಾತನಾಡುವವರಲ್ಲ ಅವರು ಉತ್ತಮ ಕೇಳುಗಾರ, ಯಾತ್ರೆಯಲ್ಲಿ ಕೇವಲ ಸಾರ್ವಜನಿಕರ ಸಮಸ್ಯೆ‌ ಕೇಳುತ್ತ ಅವರ ಜೊತೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಸಾಗಿದ ರಾಹುಲ್ ಗಾಂಧಿ 2ನೇ ದಿನದ ಭಾರತ ಐಕ್ಯತಾ ಯಾತ್ರೆ

Last Updated : Oct 9, 2022, 9:14 PM IST

ABOUT THE AUTHOR

...view details