ಹರಿಹರ : 370 ಕಾಯಿದೆ ರದ್ದು, ಜಮ್ಮು ಕಾಶ್ಮೀರದಲ್ಲಿ ನಮ್ಮ ಸೈನಿಕರ ಹತ್ಯೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಿಗೂ ಉತ್ತಮ ಸ್ಥಾನ ಮಾನ ನೀಡುವುದು ಬಿಜೆಪಿ ಮಾತ್ರ. ತಾಲೂಕಿನಲ್ಲಿ ಬೂತ್ ಸಮಿತಿಯನ್ನು ಸಶಕ್ತಗೊಳಿಸಿದಾಗ ಮಾತ್ರ ನಮಗೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಬೂತ್ ಕಮಿಟಿಗಳನ್ನು, ಎಲ್ಲಾರೂ ಸೇರಿ ಮಾಡೋಣ. ಬಿಜೆಪಿ ಸದಸ್ಯತ್ವವನ್ನು ಹೆಚ್ಚಾಗಿ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನದ ಸಮಾರಂಭ ಪಾಕಿಸ್ತಾನ ಬಿಟ್ಟು ರಷ್ಯಾ, ಜಪಾನ್, ಅಮೆರಿಕ, ಆಸ್ಟ್ರೇಲಿಯ ಹಾಗೂ ಇನ್ನೂ ಅನೇಕ ದೇಶಗಳು 370 ವಿಧಿ ರದ್ದನ್ನು ಸ್ವಾಗತಿಸಿ ನಮ್ಮಗೆ ಬೆಂಬಲ ನೀಡಿವೆ. ಜಮ್ಮು-ಕಾಶ್ಮಿರದ ಸಂವಿಧಾನದ ಪ್ರಕಾರ 370ನೇ ವಿಧಿ 1/ಬಿ ಕಾಯಿದೆಯನ್ನು ತೆಗೆಯುವ ನಿಟ್ಟಿನಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಸಮಯವನ್ನು ಅಮಿತ್ ಶಾ ಅವರು ಸದುಪಯೋಗ ಪಡಿಸಿಕೊಂಡಿದ್ದಾರೆ.ಇದೇ ರೀತಿ ರಾಮಮಂದಿರ ಸಮಸ್ಯೆಯನ್ನೂ ಸಹ ಅತೀ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ. ಪಿ. ಹರೀಶ್, ಜಿಲ್ಲಾ ಚುನಾವಣೆ ಉಸ್ತುವಾರಿ ದತ್ತಾತ್ರಿ, ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ಜಿ.ಪಂ ಸದಸ್ಯ ಬಿ. ಎಮ್. ವಾಗೀಶ್ ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ಎಂ. ವೀರೇಶ್, ಅಧ್ಯಕ್ಷ ರಾಜು ರೊಖಡೆ, ಗೋವಿನಹಾಳ್ ರಾಜಣ್ಣ, ಎಚ್. ಮಂಜಾನಾಯ್ಕ, ಕೀರ್ತಿಕುಮಾರ್, ಕೆಂಚನಹಳ್ಳಿ ಮಾಂತೇಶಪ್ಪ, ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.