ಕರ್ನಾಟಕ

karnataka

ETV Bharat / state

2023ಕ್ಕೆ ಕಾಂಗ್ರೆಸ್‌ ಧೂಳೀಪಟವಾಗುತ್ತೆ, ಹಲವಾರು ಜನ‌ ಬಿಜೆಪಿಗೆ ಬರಲು ಲೈನ್‌ನಲ್ಲಿ‌ದ್ದಾರೆ : ಶಾಸಕ ಎಂಪಿರೇ - BJP MLA Renukacharya Statement in Davanagere news

ಭಾರತ್ ಬಂದ್ ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದಾರೆ. ಫೇಕ್ ರೈತರ, ಹೋರಾಟಗಾರರ ಹೋರಾಟವನ್ನು ಜನ ಬೆಂಬಲಿಸುವುದಿಲ್ಲ. ಈ ಭಾರತ್ ಬಂದ್ ಹೋರಾಟಕ್ಕೆ ನಕಲಿ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ..

ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ
ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ

By

Published : Sep 25, 2021, 8:55 PM IST

ದಾವಣಗೆರೆ :ಕಾಂಗ್ರೆಸ್‌‌ನಿಂದ ಹಲವಾರು ಜನ‌ ಬಿಜೆಪಿಗೆ ಬರಲು ಲೈನ್‌ನಲ್ಲಿ‌ ನಿಂತಿದ್ದಾರೆ. ಬಿಜೆಪಿ ತತ್ವ‌, ಸಿದ್ಧಾಂತ ಒಪ್ಪಿಕೊಂಡು ಬರಲು ತುದಿಗಾಲಿನಲ್ಲಿ ಕಾಂಗ್ರೆಸ್ ಪಕ್ಷದವರು ನಿಂತಿದ್ದಾರೆ. ಕಾದು ನೋಡಿ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, 2023ಕ್ಕೆ ಕಾಂಗ್ರೆಸ್‌ ಧೂಳೀಪಟವಾಗುತ್ತೆ. ಕಾಂಗ್ರೆಸ್‌ನಲ್ಲಿರುವ ಸಮಾನ ಮನಸ್ಕರು ಬಿಜೆಪಿಗೆ ಬರುತ್ತಾರೆ. ಕಾದು ನೋಡಿ ಎಂದು ಹೇಳಿದ್ದಾರೆ.

ಬಿಜೆಪಿಗೆ ಬೇರೆ ಪಕ್ಷದಿಂದ ನಾಯಕರು ಬರಲು ರೆಡಿ ಅಂತಿದಾರೆ ಶಾಸಕ ಎಂ ಪಿ ರೇಣುಕಾಚಾರ್ಯ

ಭಾರತ್ ಬಂದ್ ಯಾವ ಪುರುಷಾರ್ಥಕ್ಕಾಗಿ?

ಭಾರತ್ ಬಂದ್ ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದಾರೆ. ಫೇಕ್ ರೈತರ, ಹೋರಾಟಗಾರರ ಹೋರಾಟವನ್ನು ಜನ ಬೆಂಬಲಿಸುವುದಿಲ್ಲ. ಈ ಭಾರತ್ ಬಂದ್ ಹೋರಾಟಕ್ಕೆ ನಕಲಿ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಕೇಂದ್ರ, ರಾಜ್ಯದಲ್ಲಿ‌ ಉತ್ತಮ ಆಡಳಿತ ನೀಡಿದೆ. ರೈತರು ಸೇರಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಕಾರ್ಯಕ್ರಮ ನೀಡಿದೆ. ನೊಂದವರಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಜೆಪಿ ಹಾಗೂ ಮೋದಿಯವರವ ವರ್ಚಸ್ಸು ಹೆಚ್ಚುತ್ತಿರುವುದನ್ನು ಕಂಡು ಕಾಂಗ್ರೆಸ್ ಹೋರಾಟದ ಹುನ್ನಾರ ನಡೆಸಿದೆ. ಈ ಹೋರಾಟಕ್ಕೆ ಯಾವ ಜನರೂ ಬೆಂಬಲಿಸಲ್ಲ ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ABOUT THE AUTHOR

...view details