ಹರಿಹರ : ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ ರೋಗವನ್ನು ನಿಯಂತ್ರಿಸಲು ಕೋಳಿ ಫಾರಂನಲ್ಲಿ 90 ದಿನಗಳವರೆಗೆ ಯಾವುದೇ ಕೋಳಿಗಳನ್ನು ಸಾಕದಂತೆ ಫಾರಂ ಮಾಲೀಕರಿಗೆ ಶಾಸಕ ಎಸ್.ರಾಮಪ್ಪ ಸೂಚಿಸಿದರು.
ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಹಿನ್ನೆಲೆ ಸಾವಿರಾರು ಕೋಳಿಗಳನ್ನು ಕಲ್ಲಿಂಗ್ ಮಾಡಲಾಗಿದ್ದು, ಗ್ರಾಮದಲ್ಲಿ ಮತ್ತು ಕೋಳಿ ಫಾರಂನಲ್ಲಿ ವಿವಿಧ ಔಷಧಗಳನ್ನು ಸಿಂಪಡಿಸಲಾಗಿದೆ. ಪಶು ಇಲಾಖೆಯ ಆದೇಶದ ಮೇರೆಗೆ 90 ದಿನಗಳು ಗ್ರಾಮದಲ್ಲಿ ನಿಗಾ ಇರಿಸಲಾಗುವುದು ಎಂದು ಹೇಳಿದರು.