ದಾವಣಗೆರೆ:ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಗಳೂರು ತಾಲೂಕಿನ ಚಳ್ಳಕೆರೆ ಬಳಿ ನಡೆದಿದೆ.
ಬೈಕ್ಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - Davanagere accident news
ಜಗಳೂರು ತಾಲೂಕಿನ ಚಳ್ಳಕೆರೆ ಬಳಿ ಬೈಕ್ಗಳ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Accident
ಗೌಡಗೊಂಡನಹಳ್ಳಿ ಗ್ರಾಮದ ಮಂಜುನಾಥ್ ಸಾವನ್ನಪ್ಪಿದವರು ಎನ್ನಲಾಗಿದೆ. ದೊಣೆಹಳ್ಳಿ ಕಡೆಯಿಂದ ಜಗಳೂರು ಕಡೆಗೆ ಹೋಗುವ ಚಳ್ಳಕೆರೆ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿದೆ.
ಮಂಜುನಾಥ್ ಬೈಕ್ಗೆ ಆಕನೂರು ಗ್ರಾಮದ ರಮೇಶ್ ಎಂಬುವವರ ಬೈಕ್ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.