ಶಾಸಕ ಬಿ ಪಿ ಹರೀಶ್ ಹೇಳಿಕೆ ಖಂಡಿಸಿ ಭೋವಿ ಲಂಬಾಣಿ ಸಮುದಾಯ ಪ್ರತಿಭಟನೆ ದಾವಣಗೆರೆ: ಚುನಾವಣೆ ಮುಗಿದಿದೆ, ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡಿ ಕೈ ಸುಟ್ಟಿಕೊಂಡಿದೆ ಎಂಬ ಮಾತನ್ನು ಬಿಜೆಪಿ ನಾಯಕರು ಹೇಳ್ತಿದ್ದಾರೆ. ಅದ್ರೆ ಭೋವಿ, ಲಂಬಾಣಿ ಸಮುದಾಯದವರು ಈ ಬಾರಿ ಬಿಜೆಪಿಗೆ ಮತ ನೀಡಿಲ್ಲ ಎನ್ನುವುದು ಫಲಿತಾಂಶದಿಂದ ಖಾತ್ರಿಯಾಗಿದೆ ಎಂದು ಬಿಜೆಪಿ ಶಾಸಕ ಬಿ ಪಿ ಹರೀಶ್ ಮಾದಿಗ ಸಮಾಜದ ವಿರುದ್ಧ ಹೇಳಿಕೆ ನೀಡಿ, ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭೋವಿ ಸಮಾಜದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಶಾಸಕ ಬಿ ಪಿ ಹರೀಶ್ ವಿರುದ್ಧ ಮಂಗಳವಾರ ಸಮುದಾಯದ ಜನರು ಬೀದಿಗಿಳಿದು ಹರಿಹರದಲ್ಲಿ ಪ್ರತಿಭಟನೆ ನಡೆಸಿದರು.
ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ ಪಿ ಹರೀಶ್ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ತಂದು ಮಾದಿಗರಿಗೆ ಹೆಚ್ಚು ಶೇಕಡಾವಾರು ನೀಡಲಾಗಿದೆ. ಇದೇ ಕಾರಣಕ್ಕೆ ಬಿಜೆಪಿಗೆ ಮಾದಿಗ ಸಮುದಾಯ ಮತ ಹಾಕಿಲ್ಲ ಎಂದಿದ್ದರು. ಇದೇ ಸಂದರ್ಭದಲ್ಲಿ ಆಕ್ಷೇಪಾರ್ಹ ಪದವನ್ನು ಬಳಸಿದ್ದರು. ಈ ಹೇಳಿಕೆಗೆ ಮಾದಿಗ ಸಮುದಾಯ ಆಕ್ರೋಶಗೊಂಡಿದೆ.
ಇದನ್ನೂ ಓದಿ:ಗ್ಯಾರಂಟಿ ಕೊಡುಗೆಗೆ ಕಂಡೀಷನ್ಸ್ ಅಪ್ಲೈ ಮಾಡಬೇಡಿ: ಮಾಜಿ ಸಚಿವ ಅಶ್ವತ್ಥನಾರಾಯಣ
ಏಳು ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ಕಡೆ ಮಾತ್ರ ಗೆಲುವು:ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಕೈ ಜಯಭೇರಿ ಬಾರಿಸಿದ್ದು, ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಹರಿಹರದಲ್ಲಿ ಕಮಲ ಅರಳಿಸುವಲ್ಲಿ ಬಿ ಪಿ ಹರೀಶ್ ಯಶಸ್ವಿಯಾಗಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು,"ಮತದಾರರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೇಬೇಕು, ಮತ್ತೆ ಬಿಜೆಪಿ ಸರ್ಕಾರ ಸ್ಥಾಪಿಸುವ ಹುಮ್ಮಸ್ಸಿನಲ್ಲಿದ್ದೆವು. ಅದರೆ ಜನರು ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದಾರೆ. ದಾವಣಗೆರೆಯಲ್ಲಿ ನಾನು ಒಬ್ಬನೇ ಬಿಜೆಪಿ ಶಾಸಕ" ಎಂದು ಹೇಳಿದ್ರು.