ದಾವಣಗೆರೆ : ಬಟ್ಟೆ (ಹಿಜಾಬ್) ಎಂಬುದು ಪರಂಪರೆಯಿಂದ, ರೂಢಿಯಿಂದ ಬಂದಿರುವುದು. ಪರಂಪರೆಗಳು ಕಾನೂನಿಗಿಂತ ಶ್ರೇಷ್ಠವಾಗಿರುತ್ತವೆ ಎಂದು ಹಿಜಾಬ್ ಎಂದು ಹೇಳದೆ ಬಟ್ಟೆ ಎಂದು ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖ ಆಗದೆ ಇರುವುದನ್ನು ನಾವು ಪರಂಪರೆಯಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದರು.
ಜಾತಿ, ಧರ್ಮ, ನಮಸ್ಕಾರ ಮಾಡುವುದನ್ನು ಪರಂಪರೆಯಿಂದ ಆಚರಣೆ ಮಾಡ್ತಿದ್ದೇವೆ. ಪರಂಪರೆ ಮಾಡುವವರನ್ನು ನಾವು ವಿರೋಧ ಮಾಡಲ್ಲ. ಇದನ್ನು ವಿರೋಧಿಸುತ್ತಿರುವವರು, ಪ್ರತಿಬಂಧ ಮಾಡುತ್ತಿರುವರನ್ನು ಕೇಳಿದ್ರೆ ಬಟ್ಟೆ(ಹಿಜಾಬ್) ಅನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಮುಸ್ಲಿಮರು ಕೂಡ ಶಿವನ ಭಕ್ತರು. ಅವರ ಪವಿತ್ರ ಕ್ಷೇತ್ರವಾದ ಮೆಕ್ಕಾ, ಮದೀನಾದಲ್ಲಿ ಕೆಳಗೆ ಶಿವಲಿಂಗವಿದೆ ಎಂದು ತಿಳಿಸಿದರು.