ಕರ್ನಾಟಕ

karnataka

ETV Bharat / state

ರಮೇಶ್‌ ಜಾರಕಿಹೊಳಿ ಮಲ್ಲಪ್ಪಶೆಟ್ಟಿ ಕುತಂತ್ರ ಬುದ್ಧಿ ಬಿಡಬೇಕು.. ಭೀಮಾಶಂಕರ್‌ ಎಚ್ಚರಿಕೆ - Ramesh Jarkiholi Statement about Belagavi issue

ಕನ್ನಡಿಗರ ವಿರುದ್ಧ ನಿಂತು ಗೆದ್ದರೆ ಮರಾಠಿ ಶಾಸಕರಿಗೆ ಐದು ಕೋಟಿ ರೂ. ನೀಡುವುದಾಗಿ ಕನ್ನಡಿಗರನ್ನು ಕೆರಳಿಸುವ ರೀತಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಹಣ ನೀವು ಹೇಗೆ ಗಳಿಸಿದ್ದೀರಿ ಅನ್ನೋದು ಗೊತ್ತು ಅಂತಾ ರಾಜ್ಯ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

Bhimashankar Patil
ಜಾರಕಿಹೊಳಿ ಬೆಳಗಾವಿ ಗಡಿ ವಿಚಾರದಲ್ಲಿ ಮಲ್ಲಪ್ಪಶೆಟ್ಟಿ ಕುತಂತ್ರ ಬುದ್ದಿ ಕೈಬಿಡಬೇಕು:ಭೀಮಾಶಂಕರ್ ಪಾಟೀಲ್ ಎಚ್ಚರಿಕೆ

By

Published : Dec 31, 2019, 7:28 PM IST

ದಾವಣಗೆರೆ: ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿ ಗಡಿ ವಿಚಾರದಲ್ಲಿ ಮಲ್ಲಪ್ಪಶೆಟ್ಟಿ ಕುತಂತ್ರ ಬುದ್ಧಿ ಬಿಡಬೇಕು ಎಂದು ಕನ್ನಡ ಪರ ಸಂಘಟನೆ ಹೋರಾಟಗಾರ ಭೀಮಾಶಂಕರ್ ಪಾಟೀಲ್ ಎಚ್ಚರಿಕೆ‌ ನೀಡಿದ್ದಾರೆ.

ಭೀಮಾಶಂಕರ್ ಪಾಟೀಲ್, ಕನ್ನಡ ಪರ ಸಂಘಟನೆ ಹೋರಾಟಗಾರ

ಕನ್ನಡಿಗರ ವಿರುದ್ದ ನಿಂತು ಗೆದ್ದರೆ ಮರಾಠಿ ಶಾಸಕರಿಗೆ ಐದು ಕೋಟಿ ರೂಪಾಯಿ ನೀಡುವುದಾಗಿ ಕನ್ನಡಿಗರನ್ನು ಕೆರಳಿಸುವ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಆ ಹಣ ನೀವು ಎಲ್ಲಿ ಗಳಿಸಿದ್ದೀರಿ ಅಂತಾ ಗೊತ್ತಿದೆ. ಕನ್ನಡಿಗ-ಮರಾಠಿಗರ ಮಧ್ಯೆ ಬೆಂಕಿ‌ ಹಚ್ಚಿ ನಾಡದ್ರೋಹಿ ಹೇಳಿಕೆ‌ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳಗಾವಿ ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಕರ್ಮಭೂಮಿ, ಇಲ್ಲಿ ಮರಾಠಿ ಏಕೀಕರಣ ಸಮಿತಿ, ಶಿವಸೇನೆ ಪುಂಡಾಟ ನಡೆಸುತ್ತಿದೆ. ಇವರಿಗೆ ಬಟ್ಟೆ ಕಳಚಿ‌ ಮಹಾರಾಷ್ಟ್ರಕ್ಕೆ ಕಳುಹಿಸುವುದು ಗೊತ್ತಿದೆ. ಇಂತಹ ಭೂಮಿ ಬಗ್ಗೆ, ಕನ್ನಡಿಗರ ಬಗ್ಗೆ ಮಾತನಾಡಲು ನೂರು ಬಾರಿ ಯೋಚಿಸಬೇಕು. ಜನವರಿ 20ರಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಹತ್ತು ಸಾವಿರ ಜನ ಸೇರಿ ಸಾಮೂಹಿಕವಾಗಿ ನಾಡಗೀತೆ ಹೇಳುವ ಮೂಲಕ ಕರ್ನಾಟಕದ ವೈಭವವನ್ನು ಸಾರಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ನಿಷೇಧಕ್ಕೆ ಒತ್ತಡ ತರುತ್ತೇವೆ ಎಂದರು.

For All Latest Updates

TAGGED:

ABOUT THE AUTHOR

...view details