ದಾವಣಗೆರೆ:ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ರಾಹುಲ್ ತಪ್ಪಿತಸ್ಥರಾದ್ರೆ ಪಕ್ಷ ಅಧೋಗತಿಗೆ ಹೋಗುತ್ತದೆ ಎಂಬುದು ಕಾಂಗ್ರೆಸ್ ನಾಯಕರನ್ನು ಕಾಡ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಪಕ್ಷ ಅಧೋಗತಿಗೆ ಹೋಗುತ್ತೆ ಅನ್ನೋದು ಕಾಂಗ್ರೆಸ್ ನಾಯಕರನ್ನು ಕಾಡ್ತಿದೆ: ಭೈರತಿ ಬಸವರಾಜ್ - ನ್ಯಾಷನಲ್ ಹೆರಾಲ್ಡ್ ಹಗರಣ ಕುರಿತು ಭೈರತಿ ಬಸವರಾಜ್ ಪ್ರತಿಕ್ರಿಯೆ
ಕಾಂಗ್ರೆಸ್ ಪಕ್ಷದವರು ತನಿಖಾ ಸಂಸ್ಥೆಯನ್ನೇ ತನಿಖೆ ಮಾಡಲು ಹೊರಟಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಟೀಕಿಸಿದರು.
ಭೈರತಿ ಬಸವರಾಜ್
ದಾವಣಗೆರೆಯಲ್ಲಿ ಮಾತನಾಡಿದ ಅವರು, ಒಂದಲ್ಲ ಎರಡಲ್ಲ ಎರಡು ಸಾವಿರ ಕೋಟಿ ಮೌಲ್ಯದ ಹಗರಣ ಆಗಿದೆ. ಪ್ರಕರಣದ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ರಾಹುಲ್ ಗಾಂಧಿಯವರನ್ನು ತೆಗೆದುಕೊಂಡು ಹೋಗಿ ಇಡಿಯವರು ಏನಾದ್ರು ಮಾಡಿದ್ರಾ?. ಯಾರನ್ನಾದರೂ ತನಿಖೆ ಮಾಡುವ ಸ್ವಾತಂತ್ರ್ಯ ತನಿಖಾ ಸಂಸ್ಥೆಗಳಿಗಿದೆ. ಇಡಿ, ಸಿಬಿಐ ಐಟಿ ಯಾರ ಅಧೀನದಲ್ಲೂ ಇಲ್ಲ. ಬೇರೆಯವರ ತನಿಖೆ ನಡೆದಾಗ ಇದೇ ರೀತಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದ್ರಾ?. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಇದನ್ನೂಓದಿ:ಚಾಮರಾಜನಗರ: ಜಮೀನು ಕಾಯುವಾಗ ಆನೆ ದಾಳಿ; ತಂದೆ ಸಾವು, ಮಗ ಗಂಭೀರ