ದಾವಣಗೆರೆ :ವೆಲ್ಕಮ್ ಟು ದಾವಣಗೆರೆ ರೀ ಬಿಸಿ ಪಾಟೀಲ್‌ರೇ.. ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಸಂಸದ ಜಿ ಎಂ ಸಿದ್ದೇಶ್ವರ್ ಇಬ್ಬರೂ ಬಿ ಸಿ ಪಾಟೀಲ್ ಮೇಲೆ ಸ್ವಲ್ಪ ಮಟ್ಟಿಗೆ ಗರಂ ಆದ ಘಟನೆ ನಗರದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖೆಗೆ ಸಂಬಂಧಿಸಿದ ಸಭೆಗಾಗಿ ಆಗಮಿಸಿದ್ದ ಸಚಿವ ಬಿ ಸಿ ಪಾಟೀಲ್ ಅವರು, ದೂರವಾಣಿ ಕರೆ ಸ್ವೀಕರಿಸದಿದ್ದರಿಂದ ನಗರಕ್ಕೆ ಬಂದ ಸಚಿವ ಭೈರತಿ ಬಸವರಾಜ್ ವೆಲ್ಕಮ್ ಹೇಳುವುದರ ಮೂಲಕ ಕಾಲೆಳೆದಿದ್ದು, ಇತ್ತ ಸಂಸದ ಜಿ ಎಂ ಸಿದ್ದೇಶ್ವರ್ ಕೂಡ ನಮ್ಮ ಕರೆನೂ ಸ್ವಲ್ಪ ಸ್ವೀಕರಿಸಿ ಪಾಟೀಲ್‌ರೇ ಎಂದರು.