ಕರ್ನಾಟಕ

karnataka

ETV Bharat / state

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು, ಅಲ್ಲದೇ ಕಡ್ಡಾಯಗೊಳಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ - ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ 2

ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು, ಜೊತೆಗೆ ಅದನ್ನ ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.

Vishweshwar Hegde Kageri
ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Dec 4, 2022, 6:02 PM IST

ದಾವಣಗೆರೆ: ಭಗವದ್ಗೀತೆ ಶಾಲಾ ಪಠ್ಯದಲ್ಲಿ ಬರಬೇಕು. ಎಲ್ಲಾ ಶಾಲೆಗಳಲ್ಲೂ ಇದನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರದ ನಿರ್ಧಾರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲದ ಮಾತುಗಳನ್ನಾಡಿದ್ದಾರೆ.

ದಾವಣಗೆರೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎನ್ನುವ ಬಗ್ಗೆ ಚರ್ಚೆಯಾಗ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು, ಜೊತೆಗೆ ಅದನ್ನು ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಪಕ್ಷ ಪಠ್ಯವನ್ನು ಕೇಸರಿಕರಣ ಮಾಡುತ್ತಿದೆ ಅನ್ನೋ ವಿವಾದವಿದೆ. ಅದರ ಬೆನ್ನಲ್ಲೇ ಇದೀಗ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಒತ್ತಾಯ ಕೇಳಿಬರುತ್ತಿದೆ. ಸಮಾಜದ ಸ್ಥಿತಿಗತಿಗಳನ್ನು, ಆಗುಹೋಗುಗಳನ್ನು ಗಮನಿಸಿದ್ರೇ ಮನಸ್ಸುಗಳು ಅನೇಕ ರೀತಿಯಲ್ಲಿ ಒಡೆದು ಹೋಗಿವೆ. ಭಾಷೆಗಾಗಿ, ಗಡಿಗಳಿಗಾಗಿ, ನೀರಿಗಾಗಿ, ಆಹಾರ ಪದ್ಧತಿಗಳಿಗಾಗಿ, ಎಲ್ಲಾದ್ರಲ್ಲಿಯೂ ಭಿನ್ನತೆಗಳನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಏಕತೆ ಬೆಳಿಬೇಕಾದ್ರೆ, ಅದಕ್ಕೆ ಭಗವದ್ಗೀತೆಯೇ ಮೂಲ ಆಧಾರವಾಗಿರುತ್ತದೆ ಎಂದು ಸ್ಪೀಕರ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪಠ್ಯದಲ್ಲಿ ಭಗವದ್ಗೀತೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ.. ಪ್ರಮೋದ್‌ ಮುತಾಲಿಕ್

ABOUT THE AUTHOR

...view details